ದರ್ಶನ್ ಕುರುಕ್ಷೇತ್ರದಲ್ಲಿ ಅರ್ಜುನನಾಗಿ ಸೋನು ಸೂದ್!

ಸಿನಿಮಾಡೆಸ್ಕ್ : ಬಾಲಿವುಡ್ ನಟ ಸೋನು ಸೂದ್ ಅವರು ಬಹುನಿರೀಕ್ಷೆಯ ಮುನಿರತ್ನ ನಿರ್ಮಾಣದ ಕುರುಕ್ಷೇತ್ರದಲ್ಲಿ ಅರ್ಜುನನಾಗಿ ನಟಿಸುತ್ತಿದ್ದಾರೆ.

ದರ್ಶನ್ ಅಭಿನಯದ 50 ನೇ ಚಿತ್ರ ಕುರುಕ್ಷೇತ್ರದ ಕಲಾವಿದರ ಪಟ್ಟಿ ಬೆಳೆಯುತ್ತಲೇ ಇದೆ. ಈಗಾಗಲೇ ಕರ್ಣ, ಧರ್ಮರಾಯ, ಭೀಮಾ ಮುಂತಾದ ಪಾತ್ರಗಳಿಗೆ ಕಲಾವಿದರು ಆಯ್ಕೆಯಾಗಿದ್ದರು. ಆದರೆ, ಅರ್ಜುನನ ಪಾತ್ರಕ್ಕೆ ಯಾರೂ ಬಂದಿರಲಿಲ್ಲ. ಇದೀಗ ಅರ್ಜುನನಾಗಿ ಸೋನು ಸೂದ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ಧಿ ಬಂದಿದೆ.

ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ ಈಗಾಗಲೇ ಹಲವು ದಿನಗಳೇ ಆಗಿವೆ. ಈಗಾಗಲೇ ದರ್ಶನ್ ಮತ್ತು ಹರಿಪ್ರಿಯಾ ಅಭಿನಯದ ಒಂದು ಹಾಡು ಸೇರಿದಂತೆ ಹಲವು ಮಹತ್ವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾವಿದರು, ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

Courtesy: Kannada news Now

Facebook Auto Publish Powered By : XYZScripts.com