”ದರ್ಶನ್ ಕನ್ನಡದ ರಜನಿಕಾಂತ್” ಹೀಗಂದಿದ್ದು ಯಾರು ಗೊತ್ತಾ?

”ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ರಜನಿಕಾಂತ್” ಎಂದು ನವರಸ ನಾಯಕ ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಜಗ್ಗೇಶ್ ‘ದರ್ಶನ್ ಒಪನ್ ಅಪ್ ಆದ್ರೆ ಕನ್ನಡದ ರಜನಿಕಾಂತ್’ ಎಂದಿದ್ದಾರೆ. ರಜನಿಕಾಂತ್ ಭಾರತ ಚಿತ್ರರಂಗದ ಸೂಪರ್ ಸ್ಟಾರ್. ಅಪಾರ ಅಭಿಮಾನಿಗಳನ್ನ ಹೊಂದಿರುವ ಈ ನಟನಿಗೆ ಕನ್ನಡದ ನವರಸ ನಾಯಕ ಜಗ್ಗೇಶ್ ಕೂಡ ಅಭಿಮಾನಿ ಎಂಬುದು ಗಮನಿಸಬೇಕು. ಇಂತಹ ಜಗ್ಗೇಶ್ ಅವರೇ ದರ್ಶನ್ ಅವರನ್ನ ತಲೈವಾಗೆ ಹೋಲಿಸಿರುವುದು ಡಿ ಬಾಸ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

Facebook Auto Publish Powered By : XYZScripts.com