ದಂಡುಪಾಳ್ಯ- 3 ಯಾವಾಗ ತೆರೆಗೆ ಬರಲಿದೆ ಗೊತ್ತಾ

ಸಿನಿಮಾ ಡೆಸ್ಕ್ : ದಂಡುಪಾಳ್ಯ1 ಹಾಗೂ ಪಾರ್ಟ್ 2 ಸಿನಿಮಾಗಳ ಮೂಲಕ ಪ್ರೇಕ್ಷಕರ ಎದೆಯಲ್ಲಿ ನಡುಕ ಹುಟ್ಟಿಸಿದ ನಿರ್ದೇಶಕ ಶ್ರೀನಿವಾಸ್ ರಾಜು ದಂಡುಪಾಳ್ಯ 3 ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ.

ದಂಡುಪಾಳ್ಯ 3′ ಕನ್ನಡದ ಮಟ್ಟಿಗೆ ಒಂದು ವಿಭಿನ್ನ ಪ್ರಯತ್ನ. ದಂಡುಪಾಳ್ಯ ಹಂತಕರ ಕುರಿತ ಈ ಸರಣಿ ಚಿತ್ರಗಳ ಮೊದಲ ಭಾಗದಲ್ಲಿ, ದಂಡುಪಾಳ್ಯ ಹಂತಕರು ಮಾಡಿದ ಅಟ್ಟಹಾಸವನ್ನು ತೋರಿಸಲಾಗಿತ್ತು. ಆ ನಂತರ ಬಂದ ಎರಡನೆ ಭಾಗದಲ್ಲಿ, ದಂಡುಪಾಳ್ಯ ಹಂತಕರನ್ನು ಹೇಗೆ ಪೊಲೀಸರು ಇಡೀ ಪ್ರಕರಣದಲ್ಲಿ ಫಿಟ್ ಮಾಡಿದರು ಎಂಬುದನ್ನು ತೋರಿಸಲಾಗಿತ್ತು.

ಹಾಗಾಗಿ ಈ ಮೂರನೆಯ ಭಾಗವನ್ನು ನಿರ್ದೇಶಕ ಶ್ರೀನಿವಾಸ ರಾಜು ಅವರು ಯಾವ ರೀತಿ ಅಂತ್ಯ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ದಂಡುಪಾಳ್ಯ ಹಂತಕರು ನಿಜಕ್ಕೂ ಅಷ್ಟೊಂದು ಅಟ್ಟಹಾಸ ಮಾಡಿದರಾ ಅಥವಾ ಅವೆಲ್ಲಾ ಪೊಲೀಸರ ಕಟ್ಟುಕಥೆಯಾ ಎಂಬುದು ಈ ಚಿತ್ರದಲ್ಲಿ ನಿರ್ಧಾರವಾಗಬೇಕಿದೆ.

ಯೆಸ್,ಫೆಬ್ರವರಿ ತಿಂಗಳಲ್ಲಿ ದಂಡುಪಾಳ್ಯ 3 ಸಿನಿಮಾ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ, , ದಂಡುಪಾಳ್ಯ-3 ಭಾಗ ಯಾವ ರೀತಿ ಇರುವುದು ಎಂಬ ಕುತೂಹಲ ಮೂಡಿದೆ. ಚಿತ್ರದಲ್ಲಿ ಪೂಜಾಗಾಂಧಿ, ರವಿಶಂಕರ್, ಮಕರಂದ್ ದೇಶಪಾಂಡೆ, ರವಿಕಾಳೆ, ಶ್ರುತಿ, ಮುನಿ, ಪೆಟ್ರೋಲ್ ಪ್ರಸನ್ನ ಸಂಜನಾ, ಕರಿಸುಬ್ಬು, ಡ್ಯಾನಿ ಮುಂತಾದವರು ಅಭಿನಯಿಸಿದ್ದಾರೆ.

 

Facebook Auto Publish Powered By : XYZScripts.com