ದಂಡುಪಾಳ್ಯ-2 ಚಿತ್ರದಲ್ಲಿ ಮಳೆ ಹುಡುಗಿಯ ಕಿಸ್ಸಿಂಗ್ ಸೀನ್

‘ದಂಡುಪಾಳ್ಯ’ ಚಿತ್ರದಲ್ಲಿ ಮಳೆಹುಡುಗಿ ಪೂಜಾ ಗಾಂಧಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ರು. ಪೂಜಾಳ ಈ ಬೋಲ್ಡ್ ಅವತಾರ ವಿವಾದವನ್ನೂ ಹುಟ್ಟುಹಾಕಿತ್ತು. ಇದೀಗ ‘ದಂಡುಪಾಳ್ಯ-2’ ಸಿನೆಮಾದಲ್ಲೂ ಪೂಜಾ ಗಾಂಧಿ ಮೈಚಳಿ ಬಿಟ್ಟು ಅಭಿನಯಿಸಿದ್ದಾರೆ.

2012ರಲ್ಲಿ ಬಿಡುಗಡೆಯಾಗಿದ್ದ ‘ದಂಡುಪಾಳ್ಯ’ ಚಿತ್ರದ ಸೀಕ್ವಲ್ ಇದಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ‘ದಂಡುಪಾಳ್ಯ 2’ ಚಿತ್ರದಲ್ಲಿ ಪೂಜಾ ಗಾಂಧಿ, ಮಹಿಳೆಯೊಬ್ಬಳಿಗೆ ಮುತ್ತಿಡುವ ದೃಶ್ಯವಿದೆ. ಇದು ಜೈಲಿನಲ್ಲಿ ನಡೆಯುವ ಸೀನ್ ಅಂತಾ ನಿರ್ದೇಶಕ ಶ್ರೀನಿವಾಸ ರಾಜು ತಿಳಿಸಿದ್ದಾರೆ.

ಜೈಲಿನಲ್ಲಿದ್ದ ಇಬ್ಬರು ಗೆಳತಿಯರು ಪರಸ್ಪರ ಚುಂಬಿಸುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಸ್ಕ್ರಿಪ್ಟ್ ನ ಅಗತ್ಯಕ್ಕೆ ತಕ್ಕಂತೆ ಈ ಸೀನ್ ಮಾಡಲಾಗಿದೆ ಅಂತಾ ನಿರ್ದೇಶಕರು ಹೇಳಿಕೊಂಡಿದ್ದಾರೆ. ಭಯಾನಕ ದಂಡುಪಾಳ್ಯ ಗ್ಯಾಂಗ್ ಕುರಿತಾದ ಸಿನೆಮಾ ಇದಾಗಿದ್ದು, ಮಕ್ರಂದ್ ದೇಶಪಾಂಡೆ, ರವಿ ಕಾಳೆ, ಪೆಟ್ರೋಲ್ ಪ್ರಸನ್ನ ಕೂಡ ನಟಿಸಿದ್ದಾರೆ.

Courtesy: Kannada Duniya

Facebook Auto Publish Powered By : XYZScripts.com