ಥಗ್ಸ್ ಆಫ್ ಮಾಲ್ಗುಡಿ’ ಸುದೀಪ್ ಗಾಗಿ ಮಾತ್ರ: ರಕ್ಷಿತ್ ಶೆಟ್ಟಿ

ಬೆಂಗಳೂರು: ರಕ್ಷಿತ್ ಶೆಟ್ಟಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ಥಗ್ಸ್ ಆಫ್ ಮಾಲ್ಗುಡಿ ಸಿನಿಮಾ ಶೂಟಿಂಗ್ ಈ ತಿಂಗಳ ಜೂನ್ ನಲ್ಲಿ ಆರಂಭವಾಗಬೇಕಿತ್ತು. ಆದರೆ ಹಲವಾರು ಕಾರಣಗಳಿಂದಾಗಿ ಸಿನಿಮಾ ಚಿತ್ರೀಕರಣ ವಿಳಂಬವಾಗುತ್ತಿದೆ.

ನಿರ್ದೇಶಕರು ಒಂದು ಅದ್ಭುತ ಕಥೆ ಹೆಣೆದಿದ್ದು, 19ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ಜೀವನದ ಬಗೆಗಿನ ಈ ಕಥೆಯಾಗಿದೆ. ಈ ಪ್ರಾಜೆಕ್ಟ್ ಗಾಗಿ ಇಬ್ಬರು ಕಲಾವಿದರ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.

ಹಿಂದಿನ ಕಮಿಟ್ ಮೆಂಟ್ ಗಳಿಂದಾಗಿ ಥಗ್ಸ್ ಆಫ್ ಮಾಲ್ಗುಡಿ ಶೂಟಿಂಗ್ ತಡವಾಗುತ್ತಿದೆ. ಆದರೆ ಪ್ರಾಜೆಕ್ಟ್ ಸ್ಥಗಿತಗೊಂಡಿದೆ ಎಂದು ಕೆಲ ವರದಿಗಳು ಹೇಳುತ್ತಿವೆ.

ಆದರೆ ನಿರ್ದೇಶಕ ರಕ್ಷಿತ್ ಶೆಟ್ಟಿ ಯಾವುದೇ ಕಾರಣಕ್ಕೂ ಪ್ರಾಜೆಕ್ಟ್ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ, ಥಗ್ಸ್ ಆಫ್ ಮಾಲ್ಗುಡಿ ಸುದೀಪ್ ಗಾಗಿ ಮಾಡಿದ್ದು, ಅವರನ್ನು ಬಿಟ್ಟು ಬೇರೆ ಯಾರು ಈ ಪಾತ್ರ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಸುದೀಪ್ ಈ ಪಾತ್ರ ಮಾಡದಿದ್ದರೇ ನಾನು ಕಥೆಯನ್ನು ಪಕ್ಕಕ್ಕಿಡುತ್ತೇನೆ, ಬೇರೆ ಪ್ರಾಜೆಕ್ಟ್ ಬಗ್ಗೆ ಯೋಚಿಸುತ್ತೇನೆ ಎಂದು ರಕ್ಷಿತ್ ಹೇಳಿದ್ದಾರೆ.

ನಾನು ಈ ಹಿಂದಿನ ಪ್ರಾಜೆಕ್ಟ್ ಗಳಿಗೆ ಕಮಿಟ್ ಆಗಿದ್ದ ಕಾರಣ ಈ ಪ್ರಾಜೆಕ್ಟ್ ಆರಂಭ ಮಾಡುವುದು ತಡವಾಯಿತು, ಒಮ್ಮೆ ಅದು ಆರಂಭವಾದರೇ ನಾನು ಸ್ಕ್ರಿಪ್ಟ್ ಬರವಣಿಗೆಯನ್ನು ಪೂರ್ಣಗೊಳಿಸುತ್ತೇನೆ ಎಂದು ರಕ್ಷಿತ್ ತಿಳಿಸಿದ್ದಾರೆ.

ಉಳಿದವರು ಕಂಡಂತೆ ಸಿನಿಮಾ ನಂತರ, ವಾಸ್ತು ಪ್ರಕಾರ, ರಿಕ್ಕಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟ್ ಮತ್ತು ಅವನೇ ಶ್ರೀಮಾನ್ ನಾರಾಯಣ ಸಿನಿಮಾಗಳಿಗೆ ಸಹಿ ಮಾಡಿದ್ದೆ. ಹೀಗಾಗಿ ಥಗ್ಸ್ ಆಫ್ ಮಾಲ್ಗುಡಿ ವಿಳಂಬವಾಗಿದೆ.

ಈ ಎಲ್ಲಾ ಪ್ರಾಜೆಕ್ಟ್ ಗಳು ಎರಡು ವರ್ಷದಲ್ಲಿ ಪೂರ್ಣಗೊಳ್ಳುತ್ತವೆ, ನಂತರ ಥಗ್ಸ್ ಆಫ್ ಮಾಲ್ಗುಡಿ ಆರಂಭಿಸಬಹುದೆಂಬುದು ನನ್ನ ನಿರೀಕ್ಷೆಯಾಗಿತ್ತು. ಆಧರೆ ನಾನು ಅಂದು ಕೊಂಡ ಹಾಗೆ ನಡೆಯಲಿಲ್ಲ, ನನ್ನ ಪ್ರಾಜೆಕ್ಟ್ ಗಾಗಿ ಸುದೀಪ್ ಸರ್ ಕಾಯುವಂತಾಯಿತು, ಥಗ್ಸ್ ಆಫ್ ಮಾಲ್ಗುಡಿ ತೀರಾ ವಿಳಂಬವಾಯಿತು. ಕೆಲವೊಂದು ಸಂಗತಿಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ, ಎಲ್ಲವೂ ಒಮ್ಮೆ ಸಿದ್ಧವಾದ ನಂತರ ನಾನೇ ಸುದೀಪ್ ಅವರಿಗೆ ಕರೆ ಮಾಡುತ್ತೇನೆ, ಅವರಿಗೆ ಯಾವಾಗ ಡೇಟ್ಸ್ ಹೊಂದಾಣಿಕೆಯಾಗುತ್ತದೋ ಅಂದು ಕೆಲಸ ಆರಂಭಿಸುತ್ತೇನೆ, ಇದು ನನ್ನ ಯೋಜನೆಯಾಗಿದೆ, ಆದರೆ ಇನ್ನು ನಾನು ಸುದೀಪ್ ಅವರ ಜೊತೆ ಚರ್ಚಿಸಿಲ್ಲ ಎಂದು ರಕ್ಷಿತ್ ಹೇಳಿದ್ದಾರೆ.

Courtesy: Kannada Prabha

Facebook Auto Publish Powered By : XYZScripts.com