ತ್ರಿವಿಕ್ರಮ ಶಿವಣ್ಣನಿಗೆ ಬಾಲಿವುಡ್ ಸ್ಟಾರ್ ವಿಲ್ಲನ್, ಯಾರು? ಇಲ್ಲಿ ಓದಿ

‘ಎಕೆ.47’, ‘ಲಾಕಪ್ ಡೆತ್’, ‘ಹುಚ್ಚ’, ‘ಸಿಂಹದ ಮರಿ’, ‘ಕಲಾಸಿಪಾಳ್ಯ’, ‘ಮಂಡ್ಯ’, ‘ಪಾರ್ಥ’, ಹೀಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಓಂ ಪ್ರಕಾಶ್ ರಾವ್ ತಮ್ಮ 50ನೇ ಚಿತ್ರವನ್ನ ವಿಶೇಷವಾಗಿರಿಸಲು ಸಿದ್ದತೆ ನಡೆಸಿದ್ದಾರೆ. ಹೌದು, ತಮ್ಮ ಹಾಫ್ ಸೆಂಚುರಿ ಚಿತ್ರಕ್ಕೆ ಶಿವಣ್ಣನನ್ನ ನಾಯಕನನ್ನಾಗಿಸಲು ಮುಂದಾಗಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ‘ತ್ರಿವಿಕ್ರಮ’ ಎಂದು ಟೈಟಲ್ ಕೂಡ ಇಡಲಾಗಿದೆ. ವಿಶೇಷ ಅಂದ್ರೆ, ಶಿವಣ್ಣ ಮತ್ತು ಓಂ ಪ್ರಕಾಶ್ ಜೋಡಿಯ ಈ ಚಿತ್ರದಲ್ಲಿ ಬಾಲಿವುಡ್ ನಡ ಸಂಜಯ್ ದತ್ ಅವರನ್ನ ವಿಲನ್ ಆಗಿಸಲು ತಯಾರಿ ನಡೆಸಿದ್ದಾರಂತೆ.

Facebook Auto Publish Powered By : XYZScripts.com