ತೆರೆಮೇಲೆ ಬಂತು ‘ಬಿಗ್ ಬಾಸ್’ ಪ್ರಣಯ ಪಕ್ಷಿಗಳ ‘ತ್ರಿಕೋನ’ ಪ್ರೇಮಕಥೆ!

‘ಬಿಗ್ ಬಾಸ್ ಕನ್ನಡ-4’ ಪ್ರಣಯ ಪಕ್ಷಿಗಳು ಈಗ ತೆರೆಮೇಲೆ ಒಟ್ಟಾಗಿ ಬರ್ತಿದ್ದಾರೆ. ಬಿಗ್ ಬಾಸ್ ಪ್ರಣಯ ಪಕ್ಷಿಗಳು ಅಂದಾಕ್ಷಣ ನಿಮ್ಗೆ ಸಂಜನಾ ಮತ್ತು ಭುವನ್ ನೆನಪಾಗ್ತಾರೆ ಅಲ್ವಾ. ಆದ್ರೆ, ಇಲ್ಲಿ ಒಟ್ಟಾಗ್ತಿರುವುದು ಸಂಜನಾ ಮತ್ತು ಒಳ್ಳೆ ಹುಡುಗ ಪ್ರಥಮ್. ಇವರಿಬ್ಬರ ‘ಬಿಗ್ ಬಾಸ್ ಲವ್ ಸ್ಟೋರಿ’ ಈಗ ತೆರೆಮೇಲೆ ಮೂಡಲಿದೆ.ಇದರಲ್ಲಿ ಟ್ವಿಸ್ಟ್ ಏನ್ ಗೊತ್ತಾ? ಸಂಜನಾ ಮತ್ತು ಪ್ರಥಮ್ ಇಬ್ಬರ ಇದ್ಮೇಲೆ ಮತ್ತೊಬ್ಬರು ಬರಲೇಬೇಕು. ಎಸ್…..ನಿಮ್ಮ ಊಹೆ ನಿಜಾ. ಈ ಚಿತ್ರಕಥೆಯಲ್ಲಿ ಲವರ್ ಬಾಯ್ ಇಮೇಜ್ ಹೊಂದಿರುವ ಭುವನ್ ಪೊನ್ನಣ್ಣ ಕೂಡ ಇರಲಿದ್ದಾರೆ.

ಏನಿದು? ಸಂಜನಾ, ಪ್ರಥಮ್, ಭುವನ್ ಮೂವರು ಒಂದೇ ತೆರೆಯಲ್ಲಿ ಅಂತ ಶಾಕ್ ಆಗ್ಬೇಡಿ. ಇದು ನಿಜಾ. ಇಂತಹದೊಂದು ಸಾಹಸ ಮಾಡ್ತಿರುವುದು ಕಲರ್ಸ್ ಕನ್ನಡ ವಾಹಿನಿ. ಮುಂದೆ ಓದಿ…..


‘ಬಿಗ್ ಬಾಸ್’ ಮನೆಯಲ್ಲಿ ನಾವು-ನೀವೆಲ್ಲ ನೋಡಿದ್ದ ಸಂಜನಾ-ಭುವನ್-ಪ್ರಥಮ್ ನಡುವಿನ ತ್ರಿಕೋನ ಪ್ರೇಮಕಥೆಯನ್ನ ಕಲರ್ಸ್ ಕನ್ನಡ ವಾಹಿನಿಯವರು ತೆರೆಮೇಲೆ ತರಲು ನಿರ್ಧರಿಸಿದ್ದಾರೆ.

ಇದು 24 ಎಪಿಸೋಡ್ ಗಳ ಕಥೆಯಾಗಿದ್ದು, ಕಿರು ಧಾರವಾಹಿ ರೀತಿಯಲ್ಲಿ ಪ್ರಸಾರವಾಗಲಿದೆ. ಪ್ರತಿವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ 1 ಗಂಟೆಯ ಕಾಲ ಈ ಧಾರವಾಹಿ ಮೂಡಿ ಬರಲಿದೆ.


ಈ ಟ್ರಯಾಂಗಲ್ ಚಿತ್ರಕಥೆಗೆ ಟೈಟಲ್ ಅಂತಿಮವಾಗಿದ್ದು, ‘ಸಂಜು ಮತ್ತು ನಾನು’ ಎಂದು ಹೆಸರಿಡಲಾಗಿದೆ. ಈಗಾಗಲೇ ‘ಸಂಜು ಮತ್ತು ನಾನು’ ಧಾರವಾಹಿಯ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದೆ.

ಕೇವಲ ಪೋಸ್ಟರ್ ಮಾತ್ರವಲ್ಲ, ‘ಸಂಜು ಮತ್ತು ನಾನು’ ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆಯಾಗಿದ್ದು, ಸಖತ್ ಇಂಟ್ರೆಸ್ಟಿಂಗ್ ಎನಿಸಿದೆ.

ಸಂಜನಾ ಈ ಧಾರವಾಹಿಯ ಕಥಾನಾಯಕಿಯಾಗಿದ್ದು, ಪ್ರಥಮ್ ಮತ್ತು ಭುವನ್ ಇಬ್ಬರ ನಾಯಕರಿದ್ದಾರೆ. ಹೀಗಾಗಿ, ಒಂದು ನಾಯಕಿಗಾಗಿ ಇಬ್ಬರು ನಟರ ನಡುವೆ ನಡೆಯುವ ರೋಚಕ ಕಥೆ ಇದಾಗಿದೆ. ವಿಶೇಷ ಅಂದ್ರೆ, ಈ ಮೂರು ಪಾತ್ರಗಳನ್ನ ಸ್ವತಃ ಪ್ರಥಮ್, ಸಂಜನಾ ಮತ್ತು ಭುವನ್ ನಿರ್ವಹಿಸಲಿದ್ದಾರೆ.

ಸದ್ಯ, ಪೋಸ್ಟರ್ ಮತ್ತು ಟೀಸರ್ ಮೂಲಕ ಕುತೂಹಲ ಮೂಡಿಸಿರುವ ‘ಸಂಜು ಮತ್ತು ನಾನು’ ಆದಷ್ಟೂ ಬೇಗ ಕಿರುತೆರೆಯಲ್ಲಿ ಮೂಡಬರಲಿದೆ. ‘ಸಂಜು ಮತ್ತು ನಾನು’ ಧಾರವಾಹಿಯ ಅಪ್ ಡೇಟ್ಸ್ ಗಾಗಿ ಫಿಲ್ಮೀ ಬೀಟ್ ಕನ್ನಡ ಓದುತ್ತೀರಿ.

Facebook Auto Publish Powered By : XYZScripts.com