’ತಿಥಿ’ ಟೀಂನ ಮತ್ತೊಂದು ಚಿತ್ರ ’ತರ್ಲೆ ವಿಲೇಜ್’ ಟ್ರೇಲರ್ ನೋಡಿ

ತಿಥಿ ಚಿತ್ರ ಎಷ್ಟು ಪ್ರಶಸ್ತಿಗಳನ್ನು ಬಾಚಿಕೊಳ್ತು ಅಂತ ಲೆಕ್ಕ ಸಿಗೋದು ಕಷ್ಟ. ಕಲಾವಿದರಲ್ಲದವರ ಕೈಲಿ ನಟನೆ ತೆಗೆಸಿ ಸಿನಿಮಾ ಮಾಡಿದ್ದು ನಿಜಕ್ಕೂ ಸಾಹಸ ಅಂತ ಹೇಳಬಹುದು. ಇದೀಗ ಆ ಚಿತ್ರದ ಗಡ್ಡಪ್ಪ, ಸೆಂಚುರಿ ಗೌಡ, ತಮ್ಮಣ್ಣ, ಅಭಿ ಪಾತ್ರಗಳನ್ನು ಹಾಕ್ಕೊಂಡು ಮತ್ತೊಂದು ಚಿತ್ರ ತೆರೆಗೆ ಬರ್ತಿದೆ.
ಈ ಚಿತ್ರದ ಹೆಸರು ತರ್ಲೆ ವಿಲೇಜ್. ಹೆಸರು ಕೇಳಿದರೆ ನಿಮಗೆ ಇದೊಂದು ಪಕ್ಕಾ ಕಾಮಿಡಿ ಮಲಾಸೆ ಬರಿತ ಚಿತ್ರ ಅನ್ನಿಸುತ್ತದೆ. ವಿಶೇಷ ಅಂದ್ರೆ ಹಳ್ಳಿ ಭಾಷೆಯಲ್ಲಿ ಯಾವುದೇ ಡಬಲ್ ಮೀನಿಂಗ್ ಇರಲ್ಲ. ಅದು ಏನಿದ್ರೂ ನೇರಾನೇರ.
ಜೀವಿತಾ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ಶಿವ ಎಸ್ ಬಿ ನಿರ್ಮಿಸುತ್ತಿದ್ದಾರೆ. ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಕೆ ಎಂ ರಘು. ವೀರ್ ಸಮರ್ಥ್ ಅವರ ಸಂಗೀತ, ಕೆ ಎಂ ಪ್ರಕಾಶ್ ಅವರ ಸಂಕಲನ ಇದ್ದು, ಕಥೆ ಸಿದ್ದೇಗೌಡ ಬಿ ಎಸ್ ಅವರದು.

Courtesy: Balkani News

Facebook Auto Publish Powered By : XYZScripts.com