‘ತಾರಕ್’ ಸಿನಿಮಾ ಸಾಂಗ್ ಟೀಸರ್ [Video]

ಬೆಂಗಳೂರು: ಸಿನಿಮಾ ಟೀಸರ್ ಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಟ್ರೆಂಡ್ ಆರಂಭವಾಗಿದೆ, ಅರ್ಜುನ್ ಜನ್ಯ ತಾರಕ್ ಸಿನಿಮಾ ಮೂಲಕ ಸಾಂಗ್ ಟೀಸರ್ ರಿಲೀಸ್ ಮಾಡಿದ್ದಾರೆ.

ಪ್ರಕಾಶ್ ಜಯರಾಂ ನಿರ್ದೇಶನದ ತಾರಕ್ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಆಡಿಯೋ ಬಿಡುಗಡೆಗೂ ಮುನ್ನ ಸಾಂಗ್ ನ ಟೀಸರ್ ರಿಲೀಸ್ ಮಾಡಿದ್ದಾರೆ. ದರ್ಶನ್ 49ನೇ ಸಿನಿಮಾವಾದ ತಾರಕ್ ನಲ್ಲಿ ಶೃತಿ ಹರಿಹರನ್ ಮತ್ತು ಸಾನ್ವಿ ಶ್ರೀವಾತ್ಸವ್ ನಾಯಕಿಯರಾಗಿ ನಟಿಸಿದ್ದಾರೆ. ಸಾಂಗ್ ಟೀಸರ್ ಆನ್ ಲೈನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಸಾಂಗ್ ಟೀಸರ್ ಬಿಡುಗಡೆ ಮಾಡುವುದರಿಂದ ಕೇಳುಗರಲ್ಲಿ ಹೆಚ್ಚಿನ ಕುತೂಹಲ ಮೂಡಿಸುತ್ತದೆ. ಹಿಗಾಗಿ ಪೂರ್ಣ ಹಾಡು ಕೇಳಲು ಉತ್ಸುಕರಾಗಿರುತ್ತಾರೆ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದಾರೆ.

 

 

Facebook Auto Publish Powered By : XYZScripts.com