ತಾರಕ್ ನಂತರ ‘ದಿಟ್ಟ ನಿರ್ಧಾರ’ ಕೈಗೊಂಡ ದರ್ಶನ್

ಅದೊಂದು ಕಾಲವಿತ್ತು. ಒಂದು ಸಿನಿಮಾ ಮಾಡಬೇಕಾದರೇ ನಿಗದಿತ ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತಿದ್ದರು. ಆದ್ರೆ, ಇತ್ತೀಚಿನ ದಿನಗಳಲ್ಲಿ ಒಂದು ಸಿನಿಮಾದ ಶೂಟಿಂಗ್ 100 ದಿನಗಳಾದರೂ ಮುಗಿಯುವುದಿಲ್ಲ.

ಇದರಿಂದ ಸ್ಟಾರ್ ನಟರ ಸಿನಿಮಾಗಳು ವರ್ಷಕ್ಕೆ ಒಂದು ಅಥವಾ ಎರಡು ಮಾತ್ರ ಬಿಡುಗಡೆಯಾಗುತ್ತಿವೆ. ಆದ್ರೆ, ಈ ವಿಷ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ನಿರ್ಧಾರವನ್ನ ಕೈಗೊಂಡಿದ್ದಾರೆ.

ಇನ್ಮುಂದೆ ದರ್ಶನ್ ಅವರ ಕಾಲ್ ಶೀಟ್ ಬೇಕಂದ್ರೆ, ನಿರ್ಮಾಪಕರು ಹಾಗೂ ನಿರ್ದೇಶಕರು ಮೊದಲೇ ಪ್ಲಾನ್ ಮಾಡ್ಕೊಂಡು ಸಿನಿಮಾ ಮಾಡ್ಬೇಕು. ಇಲ್ಲವಂದ್ರೆ, ‘ದಾಸ’ ಕಾಲ್ ಶೀಟ್ ಕೊಡಲ್ಲ. ಅಷ್ಟಕ್ಕೂ, ದರ್ಶನ್ ಕೈಗೊಂಡಿರುವ ಹೊಸ ತೀರ್ಮಾನವೇನು? ಮುಂದೆ ಓದಿ…..

ದರ್ಶನ್ ಹೊಸ ತೀರ್ಮಾನ
65 ದಿನ ಮಾತ್ರ ಕಾಲ್ ಶೀಟ್ಇನ್ಮುಂದೆ ಒಂದು ಚಿತ್ರಕ್ಕೆ ದರ್ಶನ್ ಅವರು ಕಾಲ್ ಶೀಟ್ ನೀಡುವುದು ಕೇವಲ 65 ದಿನ ಮಾತ್ರ. ಅಷ್ಟು ದಿನದೊಳಗೆ ಚಿತ್ರದ ಕಂಪ್ಲೀಟ್ ಶೂಟಿಂಗ್ ಮುಗಿಸಬೇಕು.

ಸೀಮಿತ ದಿನಕ್ಕೆ ಕಾಲ್ ಶೀಟ್
5 ದಿನ ಬೋನಸ್ಒಂದು ವೇಳೆ 65 ದಿನದಲ್ಲಿ ಚಿತ್ರೀಕರಣ ಮುಗಿಯದಿದ್ದರೇ, ಇನ್ನು 5 ದಿನಗಳು ಹೆಚ್ಚವರಿಯಾಗಿ ಬೋನಸ್ ನೀಡಲಿದ್ದಾರೆ. ತದ ನಂತರ ಮುಗಿಸಲ್ಲ ಅಂದ್ರೆ, ಕಷ್ಟವಾಗಬಹುದು. ಅಲ್ಲಿಗೆ 70 ದಿನಗಳಿಗಿಂತ ಹೆಚ್ಚಾಗಿ ಡೇಟ್ಸ್ ಕೊಡಬಾರದು ಎಂಬ ತೀರ್ಮಾನಕ್ಕೆ ದರ್ಶನ್ ಬಂದಿದ್ದಾರೆ.

70 ದಿನ ಮಾತ್ರ ದರ್ಶನ್ ಲಭ್ಯ
ಆ ನಂತರವೂ ಡೇಟ್ ಬೇಕಂದ್ರೆ ಫೈನ್ ಕಟ್ಟಬೇಕು70 ದಿನಗಳ ನಂತರವೂ ಡೇಟ್ಸ್ ಬೇಕೆಂದರೆ ಹೆಚ್ಚುವರಿ ಫೈನ್ ಕಟ್ಟಬೇಕೆಂದು ಬದಲಿ ಐಡಿಯಾ ಕೊಟ್ಟಿದ್ದಾರೆ. ಅಂದ್ಹಾಗೆ, ದರ್ಶನ್ ಅವರ ಈ ನಿರ್ಧಾರ ‘ತಾರಕ್’ ಚಿತ್ರದಿಂದಲೇ ಜಾರಿಗೆ ಬಂದಿದೆಯಂತೆ.

ಮಿಲನ ಪ್ರಕಾಶ್ ಮೆಚ್ಚುಗೆ
64 ದಿನದಲ್ಲಿ ತಾರಕ್ ಕಂಪ್ಲೀಟ್ಮಿಲನ ಪ್ರಕಾಶ್ ನಿರ್ದೇಶನದ ‘ತಾರಕ್’ ಸಿನಿಮಾ ಕೇವಲ 64 ದಿನದಲ್ಲಿ ಕಂಪ್ಲೀಟ್ ಆಗಿದೆಯಂತೆ. ನಿರ್ದೇಶಕ ಪ್ರಕಾಶ್ ಅವರು ಅಂದುಕೊಂಡಿದ್ದ ದಿನದಲ್ಲಿ ಚಿತ್ರೀಕರಣ ಮುಗಿಸಿದ ಮೇಲೆ ಇಂತಹದೊಂದು ನಿರ್ಧಾರಕ್ಕೆ ಬಂದಿದ್ದಾರೆ. ಪ್ರಕಾಶ್ ಅವರು ಮಾಡಿಕೊಂಡಿದ್ದ ಸಿದ್ಧತೆಗಳು ಹಾಗೂ ಅದರಂತೆ ಚಿತ್ರೀಕರಣ ಮುಗಿಸಿರುವ ಬಗ್ಗೆ ದರ್ಶನ್ ಸಂತಸ ವ್ಯಕ್ತಪಡಿಸಿದ್ದಾರೆ.

source: filmibeat.com

Facebook Auto Publish Powered By : XYZScripts.com