ತಮಿಳು ಚಿತ್ರಗಳನ್ನೇ ಪ್ರದರ್ಶಿಸುವ ಊರ್ವಶಿ ಚಿತ್ರ ಮಂದಿರವನ್ನೂ ಆಕ್ರಮಿಸಿಕೊಂಡ ಟಗರು.. ಚಿತ್ರಣ ಹೇಗಿದೆ ಇಲ್ಲಿ ನೋಡಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ನಾಳೆ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹೀಗಾಗಿ, ಗಾಂಧಿನಗರದ ಯಾವುದೇ ಮೂಲೆಗೆ ಹೋದ್ರು ಟಗರು ಹವಾ ಜೋರಾಗಿದೆ. ಟಗರು ಪೋಸ್ಟರ್ ಗಳು ಮತ್ತು ಕಟೌಟ್ ಗಳು ಚಿತ್ರಮಂದಿರಗಳ ಬಳಿ ರಾರಾಜಿಸುತ್ತಿದೆ.

ಹೀಗೆ, ರಿಲೀಸ್ ಗೂ ಮೊದಲೇ ಇಷ್ಟೆಲ್ಲಾ ಅಬ್ಬರ ಇಡುತ್ತಿರುವ ‘ಟಗರು’ ಲಾಲ್ ಬಾಗ್ ರಸ್ತೆಯಲ್ಲಿರುವ ಊರ್ವಶಿ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ. ಈ ಹಿನ್ನೆಲೆ ಊರ್ವಶಿ ಚಿತ್ರಮಂದಿರ ಸಂಪೂರ್ಣವಾಗಿ ಶಿವಣ್ಣನ ಕಟೌಟ್ ಗಳಿಂದ ಶೃಂಗಾರಗೊಂಡಿದೆ. ಡಾ ರಾಜ್ ಕುಮಾರ್ ಅವರ ಪೋಸ್ಟರ್ ಕೂಡ ಚಿತ್ರಮಂದಿರದ ಎದುರಲ್ಲೇ ಹಾಕಲಾಗಿದೆ. ಇದು ಒಂದು ರೀತಿಯಲ್ಲಿ ಸ್ಯಾಂಡಲ್ ವುಡ್ ಮಂದಿ ಖುಷಿ ಪಡುವ ವಿಚಾರ.

ಯಾಕಂದ್ರೆ, ಊರ್ವಶಿ ಥಿಯೇಟರ್ ನಲ್ಲಿ ತುಂಬ ವಿರಳವಾಗಿ ಕನ್ನಡ ಸಿನಿಮಾಗಳು ಪ್ರದರ್ಶನವಾಗುತ್ತೆ. ತಮಿಳು ನಟ ರಜನಿಕಾಂತ್, ಕಮಲ್ ಹಾಸನ್, ಅಜಿತ್ ಮತ್ತು ವಿಜಯ್ ಸಿನಿಮಾಗಳಿಗೆ ಇಲ್ಲಿ ಬೇಡಿಕೆ ಹೆಚ್ಚಿದೆ. ಇವರು ಸಿನಿಮಾಗಳ ಬಂದ್ರೆ ಇಡೀ ಸಿನಿಮಾ ಮಂದಿರ ಮತ್ತು ಸುತ್ತಮುತ್ತಲಿನ ಕಟ್ಟಡಗಳು ಕೂಡ ಪೋಸ್ಟರ್ ಗಳಿಂದ ತುಂಬುತ್ತವೆ.

ಇದೀಗ, ಟಗರು ಚಿತ್ರದಿಂದ ಊರ್ವಶಿ ಚಿತ್ರಮಂದಿರದ ಬಳಿ ಕನ್ನಡ ಚಿತ್ರಕ್ಕೂ ಅದೇ ರೀತಿ ಟ್ರೆಂಡ್ ಆರಂಭವಾಗಿರುವುದು ನಿಜಕ್ಕೂ ಸಂತಸ ತಂದಿದೆ. ಸದ್ಯಕ್ಕೆ, ಇನ್ನು ಪೋಸ್ಟರ್ ಮತ್ತು ಕಟೌಟ್ ಗಳನ್ನ ಹಾಕಲಾಗುತ್ತಿದೆ. ಬಹುಶಃ ನಾಳೆ ಬೆಳಿಗ್ಗೆ ಊರ್ವಶಿ ಚಿತ್ರಮಂದಿರ ನೋಡೋಕೆ ಶಿವರಾಜ್ ಕುಮಾರ್ ಉತ್ಸವ ರೀತಿ ಶೃಂಗಾರವಾಗಿರಲಿದೆ.

Facebook Auto Publish Powered By : XYZScripts.com