ತಮಿಳಿನಲ್ಲಿ ‘ಉಳಿದವರು ಕಂಡಂತೆ’ ಚಿತ್ರದ ಖದರ್ ನೋಡಿ

ಕನ್ನಡದ ಸೂಪರ್ ಹಿಟ್ ಚಿತ್ರ ‘ಉಳಿದವರು ಕಂಡಂತೆ’ ತಮಿಳಿಗೆ ರೀಮೇಕ್ ಆಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇದೀಗ ತಮಿಳಿನಲ್ಲಿ ‘ಉಳಿದವರು ಕಂಡಂತೆ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಖತ್ ಸ್ಟೈಲಿಶ್ ಆಗಿ ಮೂಡಿ ಬಂದಿದೆ.

ಹೌದು, ಮಲಯಾಳಂ ಸ್ಟಾರ್ ನಟ ನಿವಿನ್ ಪೌಲಿ ಈ ಚಿತ್ರದ ನಾಯಕನಾಗಿದ್ದು, ಚಿತ್ರಕ್ಕೆ ‘ರಿಚ್ಚಿ’ ಎಂದು ಟೈಟಲ್ ಇಡಲಾಗಿದೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ಪಾತ್ರವನ್ನ ತಮಿಳಿನಲ್ಲಿ ನಿವಿನ್ ಪೌಲಿ ಕಾಣಿಸಿಕೊಂಡಿದ್ದು, ಮೂಲ ಚಿತ್ರದಂತೆ ಅದೇ ಸ್ಟೈಲ್, ಅದೇ ಖದರ್ ಇಲ್ಲೂ ನೋಡಬಹುದು.

ಅಂದ್ಹಾಗೆ, ‘ರಿಚ್ಚಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಚಿತ್ರಕಥೆ ಬರೆದಿದ್ದು, ಗೌತಮ್ ರಾಮಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಶೀತಲ್ ಶೆಟ್ಟಿ ಮಾಡಿದ್ದ ಪತ್ರಕರ್ತೆಯ ಪಾತ್ರವನ್ನು ತಮಿಳಿನಲ್ಲಿ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಮಾಡ್ತಿದ್ದಾರೆ. ಉಳಿದಂತೆ ನಟರಾಜನ್ ಸುಬ್ರಮಣಿ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದ್ರೆ, ಮೂಲ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಅವರು ನೀಡಿರುವ ಸಂಗೀತವನ್ನೇ ಈ ಚಿತ್ರಕ್ಕೂ ಬಳಸಲಾಗುತ್ತಿದೆ.

‘ಉಳಿದವರು ಕಂಡಂತೆ’ 2014 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನ ಸ್ವತಃ ರಕ್ಷಿತ್ ಶೆಟ್ಟಿ ಅವರೇ ನಿರ್ದೇಶಿಸಿ ನಟಿಸಿದ್ದರು. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ಕಿಶೋರ್, ಯಜ್ಞಾಶೆಟ್ಟಿ, ಶೀತಲ್ ಶೆಟ್ಟಿ, ತಾರಾ ಸೇರಿದಂತೆ ಹಲವು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಕಡಿಮೆ ಬಜೆಟ್ ನಲ್ಲಿ ತಯಾರಾಗಿದ್ದ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿತ್ತು.

source: filmibeat.com

Facebook Auto Publish Powered By : XYZScripts.com