ತಂದೆಯ ಕನಸನ್ನು ನನಸು ಮಾಡ್ತಾರಂತೆ ವಿನಾಯಕ್ ಜೋಷಿ!

ನಟ ವಿನಾಯಕ್ ಜೋಷಿ ಅವರ ತಂದೆ ವಾಸುದೇವ್ ಜೋಷಿ ಅವರಿಗೆ ಮಗನನ್ನು ಸ್ಯಾಂಡಲ್ ವುಡ್ ನಲ್ಲಿ ಒಬ್ಬ ಉತ್ತಮ ನಟನನ್ನಾಗಿ ಮಾಡಬೇಕೆಂಬ ಆಸೆ ಇತ್ತಂತೆ. ಆದರೆ ಅವರ ಆಸೆ ನೆರವೇರಲಿಲ್ಲ. ಮಗನಿಗೆ ಒಂದು ನೆಲೆ ಕಲ್ಪಿಸಿಕೊಡಬೇಕು ಎನ್ನುವಷ್ಟರಲ್ಲಿಯೇ ನಿಧನ ಹೊಂದಿದ್ದರು. ಹೌದು ನಿನ್ನೆಗೆ ವಾಸುದೇವ್ ಜೋಷಿ ಅಗಲಿ 10 ವರ್ಷಗಳಾಗಿದೆ.
‘ಜೋಷ್’ ಸಿನಿಮಾದ ಮೂಲಕ ವಿನಾಯಕ್ ಜೋಷಿ ನಾಯಕನಾಗಿ ಸ್ಯಾಂಡಲ್ ವುಡ್ ನಲ್ಲಿ ಪರಿಚಯಗೊಂಡರು. ನಂತರ ವಿನಾಯಕ್ ತಂದೆ ವಾಸುದೇವ್ ಜೋಷಿ ತಮ್ಮ 51 ನೇ ವಯಸ್ಸಿನಲ್ಲಿ ತೀರಿಕೊಂಡರು. ನಂತರ ತಂದೆಯ ಸಾವಿನ ನಂತರ ವಿನಾಯಕ್ ಜೋಷಿ ಬಹಳ ಕಷ್ಪಪಟ್ಟಿದ್ದಾರೆ. ವಿನಾಯಕ್ ಜೋಷಿ ಅವರ ತಾಯಿಯೂ ಕೂಡ ಮಗನನ್ನು ಸಾಕಲು ಬಹಳ ಕಷ್ಪಪಟ್ಟಿದ್ದಾರಂತೆ.

ಇದೀಗ ವಿನಾಯಕ್ ತಮ್ಮ ತಂದೆಯ ‘ಜೋಷಿ ಚಿತ್ರ’ ಪ್ರೊಡಕ್ಷನ್ ಹೌಸನ್ನು ಮತ್ತೆ ರೀಲಾಂಚ್ ಮಾಡಲಿದ್ದಾರೆ.

ಮೊದಲ ಹಂತವಾಗಿ ಪ್ರೊಡಕ್ಷನ್ ಹೌಸ್ ಮೂಲಕ ‘ಜೋಶೀಲೇ’ ಎನ್ನುವ ವೆಬ್ ಸೀರೀಸ್ ಮಾಡಲು ತಯಾರಿ ನಡೆಸಿದ್ದಾರಂತೆ.

ತಂದೆಯನ್ನೇ ನಾನು ನೋಡಿ ಕಲಿತು ಈ ಲೆವೆಲ್ ಗೆ ಬಂದಿದ್ದೇನೆ. ಎಂದಿಗೂ ಕುಗ್ಗದ ಅವರ ಛಲವೇ ನನಗೆ ಆದರ್ಶ ಎಂದು ವಿನಾಯಕ್ ಜೋಶಿ ಹೇಳಿದ್ದಾರೆ.

Courtesy: Kannada news now

Facebook Auto Publish Powered By : XYZScripts.com