ಡ್ರಗ್ ಡೀಲಿಂಗ್ ಮಾಡ್ತಾರಾ ಭಾವನಾ… ಇಲ್ಲಿ ಓದಿ

ಕನ್ನಡದ ನಿರ್ಮಾಪಕ ನವೀನ್ ಜೊತೆ ಇತ್ತೀಚೆಗೆಷ್ಟೇಸಪ್ತಪದಿ ತುಳಿದ ಭಾವನಾ ಈಗ ಡ್ರಗ್ ಡೀಲರ್ ಆಗಿದ್ದಾರೆ. 

ಯೆಸ್, ಇತ್ತೀಚೆಗೆ ಟಗರು ಸಿನಿಮಾದಲ್ಲಿ ಮಿಂಚಿದ್ದ ಬೆಡಗಿ ಭಾವನಾ ಇನ್ಸ್ ಪೆಕ್ಟರ್ ವಿಕ್ರಮ್’ ನಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ಭಾವನಾ ಡ್ರಗ್ ಡೀಲರ್ ಪಾತ್ರ ಮಾಡ್ತಿದ್ದಾರಂತೆ. . ವಿಖ್ಯಾತ್ ಪ್ರೊಡಕ್ಷನ್ ನಡಿ ತಯಾರಾಗುತ್ತಿರುವ ಚಿತ್ರಕ್ಕೆ ನರಸಿಂಹ ಅವರ ನಿರ್ದೇಶನವಿದೆ. ನಾಯಕನಾಗಿ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದು, ಇದೇ ಮೊದಲ ಬಾರಿಗೆ ತೆರೆಮೇಲೆ ಭಾವನಾ ಪ್ರಜ್ವಲ್ ಮೋಡಿ ಮಾಡಲಿದ್ದಾರೆ.

ಈಗಾಗಲೇ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಮುಂದಿನ ವಾರದಿಂದ ಚಿತ್ರೀಕರಣದಲ್ಲಿ ಭಾವನಾ ತೊಡಗಲಿದ್ದಾರೆ.

Facebook Auto Publish Powered By : XYZScripts.com