ಡಿ ಬಾಸ್ ಜೊತೆ ಕಾಳಗಕ್ಕೆ ಇಳಿದ ಟಗರು ಡಾಲಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಸಿನಿಮಾಗೆ ಸಕಲ ಸಿದ್ದತೆಗಳು ನಡೆಯುತ್ತಿದೆ. ಚಿತ್ರೀಕರಣಕ್ಕಾಗಿ ಲೊಕೇಷನ್ಸ್ ನೋಡಿಕೊಂಡು ಬಂದಿರಿವ ಸಿನಿಮಾ ಟೀಂ ಹೊಸ ಪಾತ್ರಗಳನ್ನ ಜನರಿಗೆ ಪರಿಚಯಿಸುತ್ತಾ ಬರುತ್ತಿದ್ದಾರೆ.

ಕಳೆದವಾರವಷ್ಟೇ ಹೊಸ ನಾಯಕಿಯನ್ನ ಕರೆತಂದಿದ್ದ ನಿರ್ಮಾಪಕರು ಈಗ ದರ್ಶನ್ ಚಿತ್ರಕ್ಕೆ ಕನ್ನಡ ಸಿನಿಮಾರಂಗದ ಭರವಸೆ ನಾಯಕ ನಟನಾಗಿರುವ ಧನಂಜಯ ಅವರನ್ನ ಕರೆದಂತಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಹೀರೋ ಆಗಿ ಮಿಂಚುತ್ತಿರುವ ಧನಂಜಯ ದರ್ಶನ್ ಅವರ ಸಿನಿಮಾದಲ್ಲಿ ಯಾವ ಪಾತ್ರ ಮಾಡುತ್ತಾರೆ? ದರ್ಶನ್ ಚಿತ್ರದಲ್ಲಿ ಧನಂಜಯ ಅಭಿನಯಿಸಲು ಕಾರಣವೇನು? ಚಿತ್ರೀಕರಣ ಪ್ರಾರಂಭ ಯಾವಾಗ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಚಾಲೆಂಜಿಂಗ್ ಸ್ಟಾರ್ ಅಭಿನಯದ ಪಿ ಕುಮಾರ್ ನಿರ್ದೇಶನದ ಶೈಲಜಾ ನಾಗ್ ನಿರ್ಮಾಣದ ಸಿನಿಮಾದಲ್ಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಇನ್ನು ಹೆಸರಿಡದ ಚಿತ್ರದಲ್ಲಿ ಧನಂಜಯ ವಿಲನ್ ಆಗಿ ಮಿಂಚಲಿದ್ದಾರಂತೆ. ಸ್ಪೆಷಲ್ ಸ್ಟಾರ್ ಆಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಧನಂಜಯ ಟಗರು ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸಿನಲ್ಲಿ ಆಶ್ಚರ್ಯ ಮೂಡುವಂತೆ ಮಾಡಿದ್ದರು. ಈಗ ಮತ್ತೊಮ್ಮೆ ಧನಂಜಯ ಅವರನ್ನ ವಿಭಿನ್ನ ಪಾತ್ರದಲ್ಲಿ ನೋಡುವ ಅವಕಾಶ ಸಿಕ್ಕಿದೆ.

ಟಗರು ಸಿನಿಮಾದ ಟೀಸರ್ ನಲ್ಲಿ ಡಾಲಿ ಪಾತ್ರದ ಚಿಕ್ಕ ಸೀನ್ ಗಳನ್ನ ತೋರಿಸಲಾಗಿದೆ. ಅದರ ಜೊತೆಯಲ್ಲಿ ಧನಂಜಯ ಇರುವ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇವೆಲ್ಲವನ್ನೂ ನೋಡಿರುವ ಪ್ರೇಕ್ಷಕ ತೆರೆ ಮೇಲೆ ಡಾಲಿ ಅಭಿನಯವನ್ನ ನೋಡಲು ಕಾತುರರಾಗಿದ್ದಾರೆ. ಸ್ಪೆಷಲ್ ಸ್ಟಾರ್ ನ ಸ್ಟೈಲಿಗೆ ಮನಸೋತಿದ್ದ ಸಿನಿಮಾ ಪ್ರೇಕ್ಷಕರು ಟಗರು ಚಿತ್ರದ ಡಾಲಿ ಲುಕ್ ನೋಡಿ ಫಿದಾ ಆಗಿದ್ದಾರೆ. ನೀಲಿ ಕಣ್ಣಿನ ಖಳನಾಯನ ಕಟ್ಟುಮಸ್ತಾದ ದೇಹಕ್ಕೆ ಇಂಪ್ರೆಸ್ ಆಗಿದ್ದಾರೆ. ಯಾವಾಗ ಟಗರು ಚಿತ್ರ ಬಿಡುಗಡೆ ಆಗುತ್ತೆ ಅಂತ ಕಾಯುತ್ತಿದ್ದಾರೆ.

 

Facebook Auto Publish Powered By : XYZScripts.com