ಡಿ ಉತ್ಸವಕ್ಕೆ ಸಿಡಿಯುವುದಿಲ್ಲ ಪಟಾಕಿ

ಕಲಾವಿದರ ಹುಟ್ಟುಹಬ್ಬಗಳು ಅಂದರೆ ಅಭಿಮಾನಿಗಳಿಗೆ ತುಂಬಾನೇ ಖುಷಿ. ತಮ್ಮ ಬರ್ತಡೇಯನ್ನ ಆಚರಣೆ ಮಾಡಿಕೊಳ್ಳದ ಅದೆಷ್ಟೋ ಜನರು ಹಣವನ್ನ ಕೂಡು ಇಟ್ಟು ನೆಚ್ಚಿನ ಸ್ಟಾರ್ ಬರ್ತಡೇಯನ್ನ ಆಚರಣೆ ಮಾಡುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ದರ್ಶನ್ ಅವರ ಹುಟ್ಟುಹಬ್ಬ ಆಚರಣೆ ಆಗಲಿದೆ. ಅಭಿಮಾನಿಗಳು ತುಂಬಾ ಉತ್ಸಾಹದಿಂದ ಸೆಲಬ್ರೇಟ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ದರ್ಶನ್ ಅವರ ಹುಟ್ಟುಹಬ್ಬದಲ್ಲಿ ಪಟಾಕಿ ಸದ್ದು ಕೇಳದಂತೆ ಅಭಿಮಾನಿಗಳು ನೋಡಿಕೊಳ್ಳಲು ಮುಂದಾಗಿದ್ದಾರೆ. ಹೌದು ದರ್ಶನ್ ಅಭಿಮಾನಿಗಳು ಈ ಬಾರಿ ಪಟಾಕಿ ಸಿಡಿಸಿ ಹಣವನ್ನ ವ್ಯಯ ಮಾಡಬೇಡಿ ಎಂದು ಎಲ್ಲರಲ್ಲೂ ಮನವಿ ಮಾಡಿದ್ದಾರೆ. ಸಾಕಷ್ಟು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹಣವನ್ನು ಹಾಳು ಮಾಡುವ ಬದಲು ಅದನ್ನ ಉಪಯುಕ್ತವಾಗುವಂತಹ ಕೆಲಸಕ್ಕೆ ಬಳಸೋಣ ಎಂದು ನಿರ್ಧರಿಸಿದ್ದಾರೆ.

ಪಟಾಕಿ ಮತ್ತು ಕೇಕ್ ಗಾಗಿ ಹೆಚ್ಚು ಹಣ ಖರ್ಚು ಮಾಡುವ ಬದಲು ಅದೇ ದುಡ್ಡಿನಿಂದ ಅನಾಥ ಮಕ್ಕಳಿಗೆ ಉಪಯೋಗವಾಗುವಂತೆ ಆಹಾರ ಪದಾರ್ಥಗಳನ್ನ ನೀಡಿ ಎಂದು ಸಂದೇಶ ಸಾರಿದ್ದಾರೆ. ಇಂತಹ ಕಾರ್ಯ ಮಾಡಲು ಸಾಕಷ್ಟು ಅಭಿಮಾನಿಗಳು ಕೂಡ ಸಮ್ಮತಿ ನೀಡಿದ್ದಾರೆ.

ಹುಟ್ಟುಹಬ್ಬ ಎಂದ ತಕ್ಷಣ ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸಿ ಸದ್ದು ಮಾಡುವುದು ಇದೇ ಹುಟ್ಟುಹಬ್ಬ ಅಲ್ಲ ಅನ್ನುವುದನ್ನ ತಿಳಿದಿರುವ ಡಿ ಫ್ಯಾನ್ಸ್ ಇಂಥದೊಂದು ಉತ್ತಮ ಕಾರ್ಯಕ್ಕೆ ಮುಂದಾಗಿರುವುದು ಸಾಮಾನ್ಯ ಜನರಿಗೂ ಮಾದರಿ ಆಗಿದೆ.

Facebook Auto Publish Powered By : XYZScripts.com