‘ಡಿ ಉತ್ಸವ’ಕ್ಕೆ ಅಭಿಮಾನಿಗಳಿಂದ ಶುರುವಾಯ್ತು ದಿನಗಣನೆ

ಸಿನಿಮಾ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬಗಳಿಗಿಂತಲೂ ತಾವು ಇಷ್ಟ ಪಡುವ ಸ್ಟಾರ್ ಗಳ ಬರ್ತಡೇ ಅಂದರೆ ಸಂಭ್ರಮ. ಸದ್ಯ ತುಂಬಾ ಹತ್ತಿರದಲ್ಲಿ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಲಿರುವ ನಟ ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

ದರ್ಶನ್ ಅಭಿಮಾನಿಗಳ ಬಳಗ ತುಂಬಾ ದೊಡ್ಡದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನ ಹೊಂದಿರುವ ಡಿ ಬಾಸ್ ಬರ್ತಡೇಗೆ ಇನ್ನು 16 ದಿನಗಳು ಬಾಕಿ ಇವೆ. ಆದರೆ ಸಂಭ್ರಮಾಚರಣೆ ಮಾತ್ರ ಈಗಾಗಲೇ ಶುರುವಾಗಿದೆ.

ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬದ ತಯಾರಿಯನ್ನ ಹೇಗೆ ಮಾಡಿಕೊಂಡಿದ್ದಾರೆ?. ಏನೆಲ್ಲಾ ಸ್ಪೆಷಲ್ ಈ ಬರ್ತಡೇಯಲ್ಲಿ ಇರಲಿದೆ?. ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬವನ್ನ ಈ ಬಾರಿ ತುಂಬಾ ಚೆನ್ನಾಗಿ ಹಾಗೂ ಅದ್ಧೂರಿಯಾಗಿ ಮಾಡಲು ಅಭಿಮಾನಿಗಳ ಸಂಘಟನೆಗಳು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ‘ಡಿ ಉತ್ಸವ’ ಎನ್ನು ಹೆಸರನ್ನೂ ಕೂಡ ಹುಟ್ಟುಹಬ್ಬದ ಸಮಾರಂಭಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಅಭಿಮಾನಿಗಳೆಲ್ಲರೂ ಒಂದೇ ಕಡೆ ಸೇರಿ ಹುಟ್ಟುಹಬ್ಬವನ್ನ ಆಚರಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಹುಟ್ಟುಹಬ್ಬಕ್ಕಾಗಿ ‘ಡಿ ಉತ್ಸವ’ ಎನ್ನುವ ಹೆಸರಿನಲ್ಲಿ ಲೋಗೋ ಮಾಡಿಸಿ ಬರ್ತಡೇ ಸೆಲಬ್ರೆಟ್ ಮಾಡುತ್ತಿರುವುದು ಇದೇ ಮೊದಲು.

ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದ ವಿಶೇಷವಾಗಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಹಿರೇಕೆರೂರಿನಲ್ಲಿ ದರ್ಶನ್ ಅಭಿಮಾನಿಗಳ ಸಂಘಟನೆಯಿಂದ ಕಬ್ಬಡಿ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ.

ಬಿಡುಗಡೆಗೆ ಸಿದ್ದವಾಗಿರುವ ಕುರುಕ್ಷೇತ್ರ ಸಿನಿಮಾದಲ್ಲಿನ ದರ್ಶನ್ ಅವರ ಲುಕ್ ಅನ್ನು ಸ್ಯಾಂಡ್ ಆರ್ಟ್ ನಲ್ಲಿ ಮಾಡಿಸಲಾಗಿದೆ. ಸ್ಯಾಂಡ್ ಆರ್ಟ್ ಮಾಡಿರುವ ವಿಡಿಯೋ ಸಿಕ್ಕಪಟ್ಟೆ ವೈರಲ್ ಆಗಿದ್ದು ಚಂದನ್ ವಿ ಕುಮಾರ್, ಚೇತನ್ ಕುಮಾರ್, ರಾಜ್ ಹಾಗೂ ಜಾನ್ಹವಿ ಇವರೆಲ್ಲರೂ ಸೇರಿ ಈ ಕಲಾಕೃತಿಯನ್ನ ತಯಾರು ಮಾಡಿದ್ದಾರೆ.

ಡಿ ಬಾಸ್ ಹುಟ್ಟುಹಬ್ಬದ ವಿಶೇಷವಾಗಿ ಕುರುಕ್ಷೇತ್ರ ಸಿನಿಮಾದ ಟ್ರೇಲರ್ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಇದರ ಜೊತೆಯಲ್ಲಿ ಇತ್ತೀಚಿಗಷ್ಟೇ ಸೆಟ್ಟೇರಿರುವ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ.

Facebook Auto Publish Powered By : XYZScripts.com