ಡಾ.ರಾಜ್ ಹುಟ್ಟು ಹಬ್ಬಕ್ಕೆ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಆಡಿಯೋ ರಿಲೀಸ್

ಸಿನಿಮಾ ಡೆಸ್ಕ್ :ಅಣ್ಣಾವ್ರ ಹುಟ್ಟು ಹಬ್ಬದಂದು ಶಿವರಾಜ್ ಕುಮಾರ್ ಅಭಿನಯದ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ಆಡಿಯೋ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿರುವ ಹಾಡುಗಳು ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಏ. 24 ಕ್ಕೆ ಬಿಡುಗಡೆಯಾಗಲಿವೆ.

ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರವು ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದು, ಎಲ್ಲರಿಗೂ ಅನ್ನ ಕೊಡುವ ರೈತ ನಾನಾ ಕಷ್ಟಗಳನ್ನು ಎದುರಿಸುತ್ತಲ್ಲೇ ಇದ್ದಾನೆ. ಆತ ಯಾಕೆ ಸುಖವಾಗಿಲ್ಲ ಮತ್ತು ಹೇಗೆ ಸುಖವಾಗಿರಬಹುದು ಎಂಬ ಕಲ್ಪನೆಯೊಂದಿಗೆ ಮಾಡಿದ ಚಿತ್ರವಾಗಿದೆ.

ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ವಿದ್ಯಾ ಪ್ರದೀಪ್ ನಟಿಸಿದ್ದು, ಚಿಕ್ಕಣ, ಸಾಧುಕೋಕಿಲ, ಶ್ರೀನಿವಾಸ್ ಮೂರ್ತಿ, ಶಿವರಾಮಣ್ಣ, ಶ್ರೀನಾಥ್, ಸದಾಶಿವಾ ಬ್ರಹ್ಮಾವರ್ , ಶರತ್ ಲೋಹಿತಾಶ್ವ, ಮೈಕೋ ನಾಗರಾಜ್ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.

ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರಕ್ಕೆ ಎಂ.ಎಸ್ ರಮೇಶ್ ಅವರ ಸಂಭಾಷಣೆಯಿದ್ದು, ಜಯಣ್ಣ ಮತ್ತು ಭೋಗೇಂದ್ರ ಸಿನಿಮಾವನ್ನು ನಿರ್ಮಿಸಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com