ಡಾ.ರಾಜ್ ಮೊಮ್ಮಗಳ ಸೌಂದರ್ಯ ನೋಡದ್ರೆ ದಂಗಾಗ್ತೀರಾ… ಇಲ್ಲಿ ನೋಡಿ

ಡಾ ರಾಜ್ ಕುಮಾರ್ ಅವರ ಕುಟುಂಬದಿಂದ ಒಬ್ಬೊಬ್ಬರೇ ಸಿನಿಮಾ ಇಂಡಸ್ಟ್ರಿ ಕಡೆ ಮುಖ ಮಾಡ್ತಿದ್ದಾರೆ. ರಾಜ್ ಪುತ್ರರ ನಂತರ ರಾಜ್ ಮೊಮ್ಮಕ್ಕಳ ಜಮಾನ ಅರಂಭವಾಗಿದೆ.

ಈಗಾಗಲೇ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಮತ್ತೊಬ್ಬ ಪುತ್ರ ಗುರು ರಾಜ್ ಕುಮಾರ್ ನಿರ್ಮಾಪಕನಾಗಿ ಕಾರ್ಯ ನರ್ವಹಿಸುತ್ತಿದ್ದಾರೆ. ಈ ಮಧ್ಯೆ ರಾಜ್ ಪುತ್ರಿ ಪೂರ್ಣಿಮಾ ಮತ್ತು ರಾಮ್ ಕುಮಾರ್ ದಂಪತಿಯ ಮಗ ಧೀರೇನ್ ರಾಮ್ ಕುಮಾರ್ ಚೊಚ್ಚಲ ಚಿತ್ರಕ್ಕೆ ಸಿದ್ದವಾಗುತ್ತಿದ್ದಾರೆ.

ಇದರ ಬೆನ್ನಲ್ಲೇ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರನ ಮಗ ಸೂರಜ್ ಕೂಡ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗೆ, ಅಣ್ಣಾವ್ರ ಮೊಮ್ಮಕ್ಕಳೆಲ್ಲ ಬಣ್ಣದ ಪರದೆಯಲ್ಲಿ ಮಿಂಚಲು ಸಿದ್ದವಾಗಿರುವಾಗಲೇ, ಮೊಮ್ಮಗಳು ಕೂಡ ಚಂದನವನಕ್ಕೆ ಹಾರುವ ಸೂಚನೆ ಕೊಟ್ಟಿದ್ದಾಳೆ. ಯಾರದು.?

ಡಾ ರಾಜ್ ಕುಮಾರ್ ಅವರ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್ ಕುಮಾರ್ ದಂಪತಿಯ ಪುತ್ರಿ ಧನ್ಯ ರಾಮ್ ಕುಮಾರ್. ಧನ್ಯ ರಾಮ್ ಕುಮಾರ್ ಅವರ ಅಣ್ಣ ಧಿರೇನ್ ರಾಮ್ ಕುಮಾರ್ ಸಿನಿಮಾ ಪ್ರವೇಶ ಮಾಡಲು ಸಜ್ಜಾಗಿದ್ದು, ಫೋಟೋಶೂಟ್ ಮಾಡಿಸಿದ್ದರು. ಇದೀಗ, ಅಣ್ಣನಿಗೆ ಕಾಂಪಿಟೇಶನ್ ಕೊಟ್ಟಿರುವ ರೀತಿಯಲ್ಲಿ ಧನ್ಯ ಫೋಟೋಶೂಟ್ ಮಾಡಿಸಿರುವ ಫೋಟೋಗಳು ಹರಿದಾಡುತ್ತಿದೆ.

ವಿಭಿನ್ನ, ವಿಶೇಷವಾಗಿ ಫೋಟೋಶೂಟ್ ಮಾಡಿಸಿರುವ ಧನ್ಯ ರಾಮ್ ಕುಮಾರ್ ಬಹುಶಃ ಚಿತ್ರರಂಗಕ್ಕೆ ಧುಮುಕುವ ತಯಾರಿ ಮಾಡಿರಬಹುದು ಎಂಬ ಕುತೂಹಲ ಕಾಡುತ್ತಿದೆ. ಯಾಕಂದ್ರೆ, ಧನ್ಯ ಅವರ ಫೋಟೋಗಳು ಅಷ್ಟರ ಮಟ್ಟಿಗೆ ಮೋಡಿ ಮಾಡುತ್ತಿದೆ. ಈ ಫೋಟೋಗಳನ್ನ ನೋಡಿದವರು ವಾವ್ಹ್…ಹೀರೋಯಿನ್ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Facebook Auto Publish Powered By : XYZScripts.com