ಡಾ.ರಾಜ್ ಜನ್ಮ ದಿನದಂದು ಶಿವಣ್ಣನ ಮುಂದಿನ ಚಿತ್ರದ ಮುಹೂರ್ತ.. ಯಾವ ಚಿತ್ರ? ಇಲ್ಲಿ ಓದಿ

ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ ಸೆಟ್ಟೇರಲಿದೆ. ಜಯಣ್ಣ-ಭೋಗೇಂದ್ರ ಈ ಸಿನಿಮಾಗೆ ಹಣ ಹೂಡಲಿದ್ದಾರೆ. ಮಫ್ತಿ ಚಿತ್ರದ ಯಶಸ್ಸಿನ ನಂತರ ಜಯಣ್ಣ-ಭೋಗೇಂದ್ರ ಜೋಡಿ ಮತ್ತು ಶಿವಣ್ಣ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿದೆ ಚಿತ್ರ. ಸಂಗೀತ ನಿರ್ದೇಶನ ಅನೂಪ್ ಸಿಳೀನ್ ಅವರದ್ದು.

ಏಪ್ರಿಲ್ 24 ರಂದು ವರನಟ ಡಾ. ರಾಜ್ ಕುಮಾರ್ ಜನ್ಮದಿನ. ಈ ಹಿನ್ನೆಲೆಯಲ್ಲಿ ಆ ದಿನ ಶಿವರಾಜ್‍ಕುಮಾರ್ ಅಭಿನಯದ ಸಿನಿಮಾ ಆರಂಭವಾಗಲಿದೆ. ಈ ಚಿತ್ರಕ್ಕೆ ರುಸ್ತುಂ ಎಂದು ಹೆಸರಿಡಲಾಗಿದೆ.

ಶಿವಣ್ಣ ನಟನೆಯ ವಿಲನ್, ಕವಚ ಚಿತ್ರಗಳು ಮುಗಿದ ಮೇಲೆ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ.

Facebook Auto Publish Powered By : XYZScripts.com