‘ಟ್ರೊಲ್ ಟಾಲಿವುಡ್ ಕೃತ್ಯ ದುರಹಂಕಾರದ ಪರಮಾವಧಿ’ ಎಂದ ನಟ ಜಗ್ಗೇಶ್.!

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತಮಿಳು ನಟ ಸತ್ಯರಾಜ್ ಬಾಯಿಂದ ಬಂದಿರುವ ಮಾತುಗಳನ್ನ ಸಹಿಸದೆ ಕರ್ನಾಟಕದಲ್ಲಿ ‘ಬಾಹುಬಲಿ-2′ ಚಿತ್ರ ಬಿಡುಗಡೆಗೆ ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕನ್ನಡಗರಿಗೆ, ಕನ್ನಡ ಪರ ಹೋರಾಟಗಾರರಿಗೆ, ಕನ್ನಡ ಚಿತ್ರರಂಗದ ಬಗ್ಗೆ ಟಾಲಿವುಡ್ ಮಂದಿ ಫೇಸ್ ಬುಕ್ ನಲ್ಲಿ ಕೇವಲವಾಗಿ ಮಾತನಾಡುತ್ತಿದ್ದಾರೆ.

ಈ ಬಗ್ಗೆ ”ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ’: ಫೇಸ್ ಬುಕ್ನಲ್ಲಿ ತೆಲುಗು ಸಿನಿ’ಭಕ್ತ’ರ ಗೇಲಿ.!” ಎಂಬ ಶೀರ್ಷಿಕೆ ಅಡಿ ನಿಮ್ಮ ‘ಫಿಲ್ಮಿಬೀಟ್ ಕನ್ನಡ’ ವರದಿ ಪ್ರಕಟ ಮಾಡಿತ್ತು. ಈ ವರದಿಗೆ ನಟ ಜಗ್ಗೇಶ್ ರಿಯಾಕ್ಟ್ ಮಾಡಿದ್ದಾರೆ. ಮುಂದೆ ಓದಿ….

‘ಫಿಲ್ಮಿಬೀಟ್ ಕನ್ನಡ’ ಪ್ರಕಟ ಮಾಡಿದ್ದ ವರದಿಗೆ ನವರಸ ನಾಯಕ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ”ಇದು ದುರಹಂಕಾರದ ಪರಮಾವಧಿ. ಇನ್ನೂ ನಮಗೆ ಬುದ್ಧಿ ಬರಲಿಲ್ಲ ಅಂದ್ರೆ… ನಮಗಿಂತ ಮೂರ್ಖರಿಲ್ಲ” ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ ಟ್ವೀಟ್ ಗೆ ರೀಟ್ವೀಟ್ ಮಾಡುವ ಮೂಲಕ ”ಉದಾರಿತನ ಬದಿಗೊತ್ತಿ.. ಸ್ವಾಭಿಮಾನಿಗಳಾಗಿ.. ಈಗಲಾದರೂ ಎಚ್ಚೆತ್ತುಕೊಳ್ಳಿ.. ಒಗ್ಗಟ್ಟಾಗಿ.. ಕನ್ನಡವನ್ನು ಕನ್ನಡಿಗರನ್ನು ಪ್ರೀತಿಸಿ ಪ್ರೋತ್ಸಾಹಿಸಿ ಬಂಧುಗಳೇ.!” ಎಂದು ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಕನ್ನಡ ಪರ ಹೋರಾಟಗಾರರ ಕುರಿತು ಒಂದಾದ ಮೇಲೊಂದರಂತೆ ನಿರಂತರವಾಗಿ ಗೇಲಿ ಮಾಡುತ್ತಿರುವ ಟಾಲಿವುಡ್ ಸಿನಿ’ಭಕ್ತ’ರ ನಡೆಗೆ ನಿಮ್ಮ ಪ್ರತಿಕ್ರಿಯೆ ಏನು.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ…. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.
‘ಬಹುಬಲಿ-2’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗ್ಬೇಕಾ.? ಈ ಕುರಿತು ಎದ್ದಿರುವ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯವನ್ನೂ ನಮಗೆ ತಿಳಿಸಿ…
Courtesy: Filmibeat

Facebook Auto Publish Powered By : XYZScripts.com