ಟ್ರಕ್ಕಿಂಗ್ ಹೋದ ಸಂಚಾರಿ ವಿಜಯ್ ಮಿಸ್ಸಿಂಗ್!

ಸಿನಿಮಾ ಡೆಸ್ಕ್ : ಟ್ರಕ್ಕಿಂಗ್ ಹೋದ ಸಂಚಾರಿ ವಿಜಯ್ ದಾರಿ ತಪ್ಪಿ ಕಾಣೆ ಆಗ್ತಾರಂತೆ. ಇದೇನು ನಿಜವಾಗಲೂ ಮಿಸ್ಸಿಂಗ್ ಆದ್ರ ಅಂತ ಯೋಚಿಸ್ತಿದ್ದೀರಾ.ಹಾಗೇನಿಲ್ಲ, ಇದು ರಿಯಲ್ ಅಲ್ಲಾ ರೀಲ್. ಯೆಸ್.

ನಟ ಸಂಚಾರಿ ವಿಜಯ್ ಇತ್ತೀಚೆಗೆ ಬಹಳ ಬ್ಯುಸಿ ಆಗಿದ್ದು, ಈಗ ನೈಜ ಘಟನೆಯನ್ನಾಧರಿಸಿದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೊಂದರಲ್ಲಿ ಟ್ರಕ್ಕಿಂಗ್ ಲೀಡರ್ ಆಗಿ ಕಾಣಿಸಿಕೊಂಡಿದ್ದಾರೆ.

ಟ್ರಕ್ಕಿಂಗ್ಗೆ ಹೋದ ಎರಡು ಟೀಮ್ 6ನೇ ಮೈಲಿಯ ಸಮೀಪ ದಾರಿ ತಪ್ಪುತ್ತಾರೆ. ಮುಂದೇನಾಗುತ್ತೆ ಎಂಬುದು ಸಿನಿಮಾದ ಕತೆ. ಇದರ ಜತೆ ನಕ್ಸಲರ ಸ್ಟೋರಿಯೂ ಕೂಡ ಇದೆಯಂತೆ. ಈ ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದ್ದು, ಬಹುತೇಕ ಈ ಸಿನಿಮಾದ ಶೂಟಿಂಗ್ ಮುಗಿದಿದೆ.

‘ಅಂದಹಾಗೆ ಈ ಸಿನಿಮಾದಲ್ಲಿ ಲವ್ ಸ್ಟೋರಿ ಇಲ್ಲ. ಬದಲಾಗಿ ಆಯಕ್ಷನ್, ಥ್ರಿಲ್ಲಿಂಗ್ ಎಲ್ಲಾ ಇದೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ ಹೋಗುತ್ತದೆ’ ಎಂದಿದ್ದಾರೆ ನಟ ವಿಜಯ್. ಚಿತ್ರದಲ್ಲಿ ಒಂದು ಥೀಮ್ ಸಾಂಗ್ ಬಿಟ್ಟರೆ ಬೇರೆ ಹಾಡುಗಳಿಲ್ಲವಂತೆ.

ಕಿರುತೆರೆ ನಟಿ ದೀಪಿಕಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com