‘ಟಗರು’ ಹಾಡಿಗೆ ಹೆಜ್ಜೆ ಹಾಕಿದ ‘ಗಾಳಿಪಟ’ ಬೆಡಗಿ

ಸಿನಿಮಾ ಡೆಸ್ಕ್ : ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಟಗರು ರಿಲೀಸ್ ಗೆ ಮುನ್ನವೇ ಭಾರಿ ಸದ್ದು ಮಾಡ್ತಿದೆ. ಹೌದು, ಸ್ಯಾಂಡಲ್ ವುಡ್ ನಲ್ಲಿ ಟಗರು ದಿನದಿಂದ ದಿನಕ್ಕೆ ಭಾರಿ ಕ್ರೇಜ್ ಹುಟ್ಟು ಹಾಕಿದೆ.

ಈಗ ಗಾಳಿಪಟ ಬೆಡಗಿ ಭಾವನಾ ರಾವ್ ಟಗರು ಚಿತ್ರದ ಹಾಡಿಗೆ ಫಿದಾ ಆಗಿದ್ದಾರೆ. ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಹಾಡಿ ಕುಣಿದಿದ್ದಾರೆ. ಟಗರು ಚಿತ್ರದ ‘ಬಲುಮ’ ಹಾಡು ಸಖತ್ ಹಿಟ್ ಆಗಿದ್ದು, ಆ ಹಾಡಿಗೆ ಭಾವನಾ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೆಬ್ರವರಿ 9 ರಾಜ್ಯದಾದ್ಯಂತ ‘ಟಗರು’ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ದುನಿಯಾ ಸೂರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಫೆಬ್ರವರಿ 9 ರಾಜ್ಯದಾದ್ಯಂತ ‘ಟಗರು’ಸಿನಿಮಾ ರಿಲೀಸ್ ಆಗಲಿದೆ. ಅಂದಹಾಗೆ ಟಗರು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಹರಿಪ್ರಿಯಾ, ಮಾನ್ವಿತಾ ಹರೀಶ್ ತೆರೆ ಹಂಚಿಕೊಂಡಿದ್ದಾರೆ.

Facebook Auto Publish Powered By : XYZScripts.com