ಟಗರು ಸಿನಿಮಾದ ‘ಚಿಟ್ಟೆ’ ವಸಿಷ್ಟ ಸಿಂಹ ಟಾಲಿವುಡ್ನಲ್ಲಿ ಗಾಯಕ

ಟಗರು ಸಿನಿಮಾದಲ್ಲಿ ‘ಚಿಟ್ಟೆ’ ಪಾತ್ರ ಮಾಡಿದ್ದ ವಸಿಷ್ಟ ಸಿಂಹ ನಟನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಜನರ ಪ್ರತಿಕ್ರಿಯೆ ಕಂಡು ವಸಿಷ್ಟ ಸಿಂಹ ಫುಲ್ ಖುಷಿ ಆಗಿದ್ದಾರೆ. ಈಗ ಈ ಕನ್ನಡದ ಕಂಚಿನ ಕಂಠದ ಕಲಾವಿದ ಟಾಲಿವುಡ್ ಗೆ ಹಾರಲು ಸಜ್ಜಾಗಿದ್ದಾರೆ. ಯೆಸ್, ವಿಶೇಷ ಏನಪ್ಪ ಅಂದ್ರೆ, ನಟನಾಗಿ ತೆಲುಗು ಚಿತ್ರಕ್ಕೆ ಹೋಗಿಲ್ಲ. ಬದಲಾಗಿ ಗಾಯಕನಾಗಿ ಹೋಗಿದ್ದಾರೆ.

ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದ ನೀಚ ಸುಳ್ಳು’. ಎಂಬ ಹಾಡಿನ ಮೂಲಕ ಗಾಯಕನಾಗಿದ್ದರು. ಈಗ ಅದೇ ಹಾಡನ್ನು ತೆಲುಗಿನಲ್ಲಿ ಹಾಡಲಿದ್ದಾರೆ. ತೆಲುಗಿನ ‘ಕಿರಾಕ್ ಪಾರ್ಟಿ’ ಸಿನಿಮಾದಲ್ಲಿ ಅದೇ ಹಾಡನ್ನು ಅವರು ಹಾಡಲಿದ್ದಾರೆ. ಅಜನೀಶ್ ಲೋಕನಾಥ್ ಅವರೇ ತೆಲುಗು ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

Facebook Auto Publish Powered By : XYZScripts.com