ಟಗರು ಸಕ್ಸಸ್ ನಂತರ ಬರಲಿದೆ ಸೂರಿ ನಿರ್ದೇಶನದ ಮತ್ತೊಂದು ಚಿತ್ರ.. ನಾಯಕ ಯಾರು? ಇಲ್ಲಿ ಓದಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ ‘ಟಗರು’ ಸಿನಿಮಾ ಈ ವರ್ಷದ ಬಹುದೊಡ್ಡ ಹಿಟ್ ಸಿನಿಮಾ. ದುನಿಯಾ ಸೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ರು. 25 ವಾರ ಚಿತ್ರಮಂದಿರದಲ್ಲಿ ರಾರಾಜಿಸಿದ್ದ ‘ಟಗರು’ ಇತ್ತೀಚಿಗಷ್ಟೆ ಕಿರುತೆರೆಯಲ್ಲೂ ಪ್ರದರ್ಶನ ಕಂಡಿತ್ತು.

‘ಟಗರು’ ಸಿನಿಮಾ ಹಿಟ್ ಆದ್ಮೇಲೆ ಆ ಚಿತ್ರದಲ್ಲಿ ಅಭಿನಯಿಸಿದ್ದ ಶಿವಣ್ಣ, ಧನಂಜಯ್, ವಸಿಷ್ಠ, ಮಾನ್ವಿತಾ, ಕಾನ್ಸ್ ಟೇಬಲ್ ಸರೋಜಾ ಹೀಗೆ ಬಹುತೇಕ ಎಲ್ಲಾ ಪಾತ್ರಧಾರಿಗಳು ಬೇರೆ ಬೇರೆ ಸಿನಿಮಾದಲ್ಲಿ ತೊಡಗಿಕೊಂಡರು. ಆದ್ರೆ, ಸೂರಿ ಮಾತ್ರ ಸೈಲೆಂಟ್ ಆಗಿ ಹೊಸ ಪ್ರಾಜೆಕ್ಟ್ ಗೆ ರೆಡಿಯಾಗ್ತಿದ್ದರು.

‘ಟಗರು’ ಚಿತ್ರದ ಯಶಸ್ಸಿನ ನಂತರ ಈಗ ನಿರ್ದೇಶಕ ದುನಿಯಾ ಸೂರಿ ಹೊಸ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಡೈರೆಕ್ಷನ್ ಕ್ಯಾಪ್ ತೊಟ್ಟು ಮತ್ತೆ ಫೀಲ್ಡ್ ಗೆ ಬಂದಿದ್ದಾರೆ. ಹೌದು, ದುನಿಯಾ ಸೂರಿ ನಿರ್ದೇಶನ ಮಾಡ್ತಿರುವ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ಮೊದಲ ದಿನದ ಚಿತ್ರೀಕರಣ ಆರಂಭವಾಗಿದೆ.

ಅಂದ್ಹಾಗೆ, ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ಡಾಲಿ ಖ್ಯಾತಿಯ ಧನಂಜಯ್ ನಾಯಕನಾಗಿದ್ದು, ನಿವೇದಿತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಶ್ರೀನಿವಾಸ ಎಂಬ ಪಾತ್ರದಲ್ಲಿ ಧನಂಜಯ್ ಹಾಗೂ ದೇವಿಕಾ ಪಾತ್ರದಲ್ಲಿ ನಿವೇದಿತಾ ಬಣ್ಣ ಹಚ್ಚಲಿದ್ದಾರೆ.ಇವರ ಜೊತೆ ಸಪ್ತಮಿ ಹಾಗೂ ಅಮೃತಾ ಎಂಬ ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನುಳಿದಂತೆ ‘ಟಗರು’ ಚಿತ್ರ ನಿರ್ಮಾಣ ಮಾಡಿದ್ದ ಕೆಪಿ ಶ್ರೀಕಾಂತ್ ಅವರೇ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದು, ಮಂಜು ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ. ಇನ್ನುಳಿದಂತೆ ‘ಟಗರು’ ಚಿತ್ರದ ತಂತ್ರಜ್ಞರೇ ಇಲ್ಲಿಯೂ ಕೆಲಸ ಮಾಡಲಿದ್ದಾರೆ.

Facebook Auto Publish Powered By : XYZScripts.com