ಟಗರು ಶಿವಣ್ಣ ಫ್ಯಾನ್ಸ್ ಆಕ್ರೋಶದ ಬಗ್ಗೆ ‘ಡಾಲಿ’ ಧನಂಜಯ್ ಹೇಳಿದ್ದೇನು.?.. ಇಲ್ಲಿ ಓದಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಧನಂಜಯ್, ವಸಿಷ್ಠ ಸಿಂಹ ಮುಖ್ಯ ಭೂಮಿಕೆಯಲ್ಲಿ ಅಭಿನಯಿದ ಟಗರು ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಆದ್ರೆ, ಯಶಸ್ಸಿನ ಜೊತೆ ವಿವಾದವೂ ಅಂಟಿಕೊಂಡಿದೆ. ಚಿತ್ರದಲ್ಲಿ ಶಿವಣ್ಣನಿಗೆ ಧನಂಜಯ್ ಮತ್ತು ವಸಿಷ್ಠ ಸಿಂಹ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ.

ಇದನ್ನ ಖಂಡಿಸಿರುವ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳು ನಿರ್ದೇಶಕ ಸೂರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಚಿತ್ರದಲ್ಲಿ ಡೈಲಾಗ್ ಗೆ ಕತ್ತರಿ ಹಾಕಿ, ಇಲ್ಲವಾದಲ್ಲಿ ಸೂರಿ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೀಗ, ಡಾಲಿ ಪಾತ್ರದಲ್ಲಿ ಮಿಂಚಿರುವ ಧನಂಜಯ್ ಈ ವಿವಾದದ ಬಗ್ಗೆ ಮಾತನಾಡಿದ್ದು, ಶಿವಣ್ಣನಿಗೆ ಬೈಯ್ದಿಲ್ಲ, ನೋವಾಗಿದ್ದರೇ ಕ್ಷಮಿಸಿ ಎಂದಿದ್ದಾರೆ. ಧನಂಜಯ್ ಏನಂದ್ರು ಎಂಬುದನ್ನ ಸಂಪೂರ್ಣವಾಗಿ ತಿಳಿಯಲು ಮುಂದೆ ಓದಿ….

”ಈ ಬಗ್ಗೆ ಯಾರಿಗೂ ಅರಿವು ಇರಲಿಲ್ಲ. ಯಾಕಂದ್ರೆ, ರಿಯಾಲಿಸ್ಟಿಕ್ ಸಿನಿಮಾ. ಹಾಗೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವು. ಸಾಮಾನ್ಯವಾಗಿ ಕೆಲವು ಜನರು ಚಿಕ್ಕ ವಿಷ್ಯಗಳಿಗೆ ಕೆಲವು ಪದಗಳನ್ನ ಬಳಸುವುದು ಉಂಟು. ಇನ್ನು ರೌಡಿಗಳು. ಅದರಲ್ಲೂ ತುಂಬ ಕೆಟ್ಟ ರೌಡಿಗಳು ಅಂದಾಗ ಆ ರೀತಿ ಮಾತನಾಡುವ ಸಾಧ್ಯತೆ ಇದೆ” – ಧನಂಜಯ್, ನಟ

”ಇದು ಡಾಲಿ ಮತ್ತು ಟಗರು ಶಿವನ ನಡುವಿನ ದೃಶ್ಯ, ಚಿಟ್ಟೆ ಮತ್ತು ಶಿವ ಪಾತ್ರದ ನಡುವಿನ ದೃಶ್ಯ. ಇಲ್ಲಿ ಧನಂಜಯ್ ಆಗಲಿ, ವಸಿಷ್ಠ ಸಿಂಹ ಆಗಲಿ ಅಥವಾ ಶಿವಣ್ಣ ಅವರಗಾಲಿ ವೈಯಕ್ತಿಕವಾಗಿ ಬರುವುದಿಲ್ಲ. ಹೀಗಾಗಿ, ಆ ರೀತಿ ಯೋಚನೆ ಬಂದಿರಲಿಲ್ಲ. ಹೀಗೆ, ಯೋಚನೆ ಮಾಡ್ಕೊಂಡು ಸಂಪೂರ್ಣವಾಗಿ ಸಿನಿಮಾ ಪ್ರೀತಿಸಿ ಮಾಡಿಕೊಂಡು ಹೋಗಿದ್ದು. ಈಗ ರಿಲೀಸ್ ಆದ್ಮೇಲೆ ಇದರ ಪರಿಣಾಮ ಗೊತ್ತಾಗುತ್ತಿದೆ. ಮ್ಯೂಟ್ ಮಾಡುವ ಯೋಚನೆ ಮಾಡಿದ್ದಾರೆ”

”ಸ್ವತಃ ಶಿವಣ್ಣನೇ ಹೇಳುತ್ತಿದ್ದರು. ಇಲ್ಲ ಮಾಡಿ, ಅದು ಡಾಲಿ ಪಾತ್ರವಷ್ಟೇ. ಕ್ಯಾರೆಕ್ಟರ್ ಗೆ ಬೇಕು ಎಂದು ಪ್ರೋತ್ಸಾಹ ನೀಡಿದ್ರು. ಅವರೇ ನಮಗೆ ಧೈರ್ಯ. ಅದರಿಂದಲೇ ನಾವು ನೈಜವಾಗಿ ಅಭಿನಯಿಸಲು ಸಾಧ್ಯವಾಯಿತು.

”ಸಿನಿಮಾನ ಬರಿ ಸಿನಿಮಾ ದೃಷ್ಟಿಯಲ್ಲಿ ನೋಡೋಣ. ಅದನ್ನ ಇನ್ನೊಂದು ಲವೆಲ್ ಗೆ ಕರೆದುಕೊಂಡು ಹೋಗೋಣ. ಬೇರೆ ಇಂಡಸ್ಟ್ರಿಯವರು ನಮ್ಮ ಸಿನಿಮಾ ಕಡೆ ನೋಡೋ ಹಾಗೆ ಮಾಡೋಣ. ಇದನ್ನ ಗಂಭೀರವಾಗಿ ತಗೆದುಕೊಳ್ಳೋದು ಬೇಡ. ಇದರಿಂದ ತೊಂದರೆಯಾಗೋದು ಬೇಡ. ಅದಕ್ಕೂ ಮೇಲೆ ನೋವಾಗಿದ್ದರೇ, ನಾನು ಕ್ಷಮೆ ಕೇಳ್ತಿನಿ” – ಧನಂಜಯ್, ನಟ

Facebook Auto Publish Powered By : XYZScripts.com