‘ಟಗರು’ ಶಿವಣ್ಣನ ಫ್ಯಾನ್ಸ್ ಸೂರಿ, ಧನಂಜಯ್ ವಿರುದ್ಧ ರೊಚ್ಚಿಗೆದ್ದಿದೇಕೆ?.. ಇಲ್ಲಿ ಓದಿ

ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ, ಸಿನಿ ರಸಿಕರು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳಿಂದ ನಿರ್ದೇಶಕ ಸೂರಿ ಮತ್ತು ಡಾಲಿ ಪಾತ್ರಧಾರಿ ಧನಂಜಯ್ ಅವರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಚಿತ್ರದ ದೃಶ್ಯಗಳಲ್ಲಿ ಖಳನಾಯಕರಾದ ಧನಂಜಯ್ ಮತ್ತು ವಸಿಷ್ಠ ಸಿಂಹ ಅವರು ಶಿವಣ್ಣನ ಕುರಿತಾಗಿ ಆಡಿರುವ ಮಾತುಗಳು ಅಭಿಮಾನಿಗಳನ್ನು ಕೆರಳಿಸಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಗಮನಕ್ಕೆ ಬರುತ್ತಲೇ ‘ಆ’ ಮಾತುಗಳಿಗೆ ಬೀಪ್ ಸೌಂಡ್ ಹಾಕಲು ಚಿತ್ರತಂಡ ತೀರ್ಮಾನಿಸಿದೆ.

Facebook Auto Publish Powered By : XYZScripts.com