‘ಟಗರು ಬಂತು ಟಗರು’ ಹಾಡಿನ ಕ್ರೇಜ್ ಎಷ್ಟಿದೆ ಇಲ್ಲಿ ನೋಡಿ

 ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಗರು’ ರಿಲೀಸ್ ಗೆ ಮುನ್ನವೇ ಭಾರಿ ಸೌಂಡ್ ಮಾಡ್ತಿದೆ.

ಟಗರು ಡಿ ಜೆ ನೈಟ್ ಕಾರ್ಯಕ್ರಮದ ನಂತರ ಈಗ ಮತ್ತೆ ಟಗರು ಸೌಂಡ್ ಮಾಡ್ತಿದೆ. ಟಗರು ಚಿತ್ರದ ಟೈಟಲ್ ಟ್ರ್ಯಾಕ್ ಒಂದು ಈಗಾಗಲೇ ಸೂಪರ್ ಹಿಟ್ ಆಗಿದೆ. ಈ ಹಾಡಿಗೆ ಬೆಂಗಳೂರಿನ ಮಹಿಳೆಯರು ಭರ್ಜರಿ ಸ್ಪೆಪ್ ಹಾಕಿದ್ದಾರೆ. ಬಸವೇಶ್ವರ ನಗರದ ಅಪಲ್ ಫಿಟ್ನೆಸ್ ಸೆಂಟರ್ ನಲ್ಲಿ ಸುಮಾರು 40 ಜನ ಟಗರು ಬಂತು ಟಗರು ಹಾಡಿಗೆ ಮಸ್ತ್ ಸ್ಟೆಪ್ ಹಾಕಿದ್ದಾರೆ.

.23 ರಾಜ್ಯದಾದ್ಯಂತ ‘ಟಗರು’ಸಿನಿಮಾ ತೆರೆಗೆ ಬರುತ್ತಿದ್ದು, ಶಿವಣ್ಣನ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಬರೀ ಕರ್ನಾಟಕದಲ್ಲಿ ಮಾತ್ರವಲ್ಲ. ವಿದೇಶಗಳಲ್ಲೂ ತುದಿಗಾಲಲ್ಲಿ ನಿಂತಿದ್ದಾರೆ. ದುನಿಯಾ ಸೂರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಟಗರು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಹರಿಪ್ರಿಯಾ, ಮಾನ್ವಿತಾ ಹರೀಶ್ ತೆರೆ ಹಂಚಿಕೊಂಡಿದ್ದಾರೆ

Facebook Auto Publish Powered By : XYZScripts.com