ಟಗರು ಚಿತ್ರ ವಿಮರ್ಶೆ: ಇಲ್ಲಿ ಓದಿ

‘ಹುಷಾರು’ ಎನ್ನುವ ಮಾತು ನಿತ್ಯ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎನ್ನುವ ಸಣ್ಣ ಎಳೆಯನ್ನು ಇಟ್ಟುಕೊಂಡು ವಿಭಿನ್ನ ಚಿತ್ರಕಥೆಯನ್ನು ಹೊತ್ತು ತಂದಿರುವ ಸಿನಿಮಾ ‘ಟಗರು’. ಮೊದಲ ಬಾರಿಗೆ ಬೇರೆಯದ್ದೇ ರೀತಿಯ ಚಿತ್ರವನ್ನು ಅಭಿಮಾನಿಗಳ ಮುಂದಿಟ್ಟು ಸಿನಿಮಾ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಳ್ಳುವಲ್ಲಿ ನಿರ್ದೇಶಕ ಸೂರಿ ಯಶಸ್ವಿ ಆಗಿದ್ದಾರೆ. ಶಿವಣ್ಣನ ಖದರಿಗೆ ಪ್ರೇಕ್ಷಕರು ಫಿದಾ ಆಗಿದ್ದಾನೆ.

ಕರ್ತವ್ಯದಲ್ಲಿ ಪೊಲೀಸ್. ಆದರೆ ಮನಸ್ಸಿನ ತೃಪ್ತಿಗಾಗಿ ಖಾಕಿ ಧರಿಸಿ ಕೆಲಸ ಮಾಡುವ ನಾಯಕ (ಶಿವರಾಜ್ ಕುಮಾರ್), ಪುಡಿ ರೌಡಿ ಆಗಿದ್ದುಕೊಂಡು ಡಾನ್ ಆಗಬೇಕೆಂಬ ಕನಸು ಹೊತ್ತು ಟಗರಿನ ಮುಂದೆ ಕಾಳಗಕ್ಕೆ ಇಳಿಯುವ ಖಳನಾಯಕ ಡಾಲಿ ಅಲಿಯಾಸ್ ನಿಂಬೆ (ಧನಂಜಯ) ಯುವ ಕವಿಯಾಗಿ ಯಾರದ್ದೋ ಪ್ರೀತಿಗೆ ಸಹಾಯ ಮಾಡಲು ಹೋಗಿ ರೌಡಿ ಆಗುವ ಮತ್ತೊಬ್ಬ ಖಳನಾಯಕ ಚಿಟ್ಟೆ ಅಲಿಯಾಸ್ ಚಿತ್ತರಂಜನ್ (ವಸಿಷ್ಠ ಸಿಂಹ). ಡಾಲಿ ತಮ್ಮ ಕಾಕ್ರೋಚ್ ಇವರುಗಳ ಜೊತೆ ನಾಯಕಿಯರಾಗಿ ಮಾನ್ವಿತಾ ಹರೀಶ್ ಹಾಗೂ ಭಾವನಾ. ಪೊಲೀಸ್ ಹಾಗೂ ರೌಡಿಗಳ ಮಧ್ಯೆ ನಡೆಯೋ ಸಮರವೇ ‘ಟಗರು’ ಸಿನಿಮಾದ ಜೀವಾಳ. ಸಿನಿಮಾದಲ್ಲಿ ಚಿತ್ರದ ನಾಯಕ ಶಿವರಾಜ್ ಕುಮಾರ್ ಪಾತ್ರ ಟಗರಿಗೆ ಹೋಲಿಕೆ ಮಾಡಲಾಗಿದೆ. ಕೋಪ ಬಂದಾಗ ಅನ್ಯಾಯ ಕಂಡಾಗ ಟಗರಂತೆ ಗುದ್ದುವುದು ಹೀರೋ ಪಾತ್ರ. ಅದೇ ರೀತಿ ಟಗರಿನಂತೆ ಇಲ್ಲಿ ಶಿವಣ್ಣ ಫೈಟ್ ಕೂಡ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಖಳನಾಯಕನಾಗಿ ಅಭಿನಯಿಸಿರುವ ಸ್ಪೆಷಲ್ ಸ್ಟಾರ್ ಧನಂಜಯ ತೆರೆ ಮೇಲೆ ಅಭಿನಯದ ಮೂಲಕ ಅಬ್ಬರಿಸಿದ್ದಾರೆ. ಶಿವಣ್ಣನ ಎದುರು ಖಡಕ್ ಡೈಲಾಗ್ ಗಳ ಮೂಲಕ ಮಿಂಚು ಹರಿಸಿದ್ದಾರೆ. ಸಿನಿಮಾ ನೋಡಿ ಥಿಯೇಟರ್ ನಿಂದ ಹೊರ ಬರುವಾಗ ಪ್ರತಿಯೊಬ್ಬರ ಬಾಯಲ್ಲಿ ಡಾಲಿ ಹೆಸರು ಕೇಳಿ ಬರುತ್ತಿದೆ. ಧನಂಜಯ ಜೊತೆಯಲ್ಲಿ ಚಿಟ್ಟೆ ಪಾತ್ರದಲ್ಲಿ ವಸಿಷ್ಠ ಸಿಂಹ ಅಭಿನಯಿಸಿದ್ದಾರೆ. ಕೆಲವೇ ದೃಶ್ಯಗಳಿದ್ದರೂ ವಸಿಷ್ಠ ತಮ್ಮ ಧ್ವನಿಯಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಮತ್ತೋರ್ವ ಖಳನಾಯಕನಾಗಿ ಸುಧೀ ಅಭಿನಯಕ್ಕೂ ಫುಲ್ ಮಾರ್ಕ್ ಸಿಕ್ಕಿದೆ.

ಟಗರು ಶಿವನಿಗೆ ನಾಯಕಿಯಾಗಿ ಜಾಕಿ ಭಾವನಾ ತೆರೆ ಮೇಲೆ ಸುಂದವಾಗಿ ಕಾಣಿಸುತ್ತಾರೆ. ಮಾನ್ವಿತಾ ಎಂದಿನಂತೆ ತಮ್ಮ ಕೆಲಸವನ್ನ ಅಚ್ಚು ಕಟ್ಟಾಗಿ ಮಾಡಿದ್ದಾರೆ.

ಟಗರು ಶಿವನಿಗೆ ನಾಯಕಿಯಾಗಿ ಜಾಕಿ ಭಾವನಾ ತೆರೆ ಮೇಲೆ ಸುಂದವಾಗಿ ಕಾಣಿಸುತ್ತಾರೆ. ಮಾನ್ವಿತಾ ಎಂದಿನಂತೆ ತಮ್ಮ ಕೆಲಸವನ್ನ ಅಚ್ಚು ಕಟ್ಟಾಗಿ ಮಾಡಿದ್ದಾರೆ. ‘ಟಗರು’ ಸಿನಿಮಾ ಹಾಡುಗಳು ಸೂಪರ್ ಹಿಟ್ ಆಗಿತ್ತು. ಸಿನಿಮಾದ ಹಿನ್ನಲೆ ಸಂಗೀತ ಪ್ರೇಕ್ಷಕರಿಗೆ ಬೇರೆಯದ್ದೇ ಫೀಲ್ ನೀಡುತ್ತೆ. ಮಾಸ್ ಕಥೆ ಇರುವ ಚಿತ್ರಕ್ಕೆ ವಿಭಿನ್ನ ರೀತಿಯ ಸಂಗೀತ ನೀಡಿದ್ದಾರೆ ಚರಣ್ ರಾಜ್ ದುನಿಯಾ ಸೂರಿ ಜೊತೆಯಲ್ಲಿ ಕಡ್ಡಿಪುಡಿ ಸಿನಿಮಾ ಕೆಲಸ ಮಾಡಿದ್ದ ಮಾಸ್ತಿ ಟಗರು ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಶಿವಣ್ಣ ಹಾಗೂ ಧನಂಜಯನಿಗೆ ಸಾಕಷ್ಟು ಮಾಸ್ ಡೈಲಾಗ್ ಗಳಿದ್ದು ಕಮರ್ಷಿಯಲ್ ಫೀಲ್ ಇಲ್ಲದೆ ಪ್ರೇಕ್ಷರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತವೆ.

‘ಟಗರು’ ಕೇವಲ ಶಿವಣ್ಣನ ಸಿನಿಮಾ ಅಲ್ಲ. ಮಲ್ಟಿ ಸ್ಟಾರ್ ಸಿನಿಮಾ ಅಂದರೆ ಇದು ಎನ್ನುವ ಫೀಲ್ ಕೊಡೋ ಚಿತ್ರ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ವೈಶಿಷ್ಟತೆಯನ್ನು ಕೊಡಲಾಗಿದ್ದು ಥಿಯೇಟರ್ ನಿಂದ ಹೊರ ಬರುವಾಗ ಪ್ರೇಕ್ಷಕ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಮಾತನಾಡುತ್ತಾರೆ. ಇಷ್ಟು ದಿನ ಕಾದಿದಕ್ಕೂ ಸಾರ್ಥಕ ಎನ್ನುವ ಚಿತ್ರವನ್ನ ಕೊಟ್ಟಿದ್ದಾರೆ ನಿರ್ದೇಶಕ ಸೂರಿ.

 

Facebook Auto Publish Powered By : XYZScripts.com