ಟಗರು ಚಿತ್ರ ಮುಗಿದ ನಂತರವೂ ಮರೆಯಲಾಗದ 5 ಡೈಲಾಗುಗಳು

ಚಿತ್ರಮಂದಿರದಲ್ಲಿ ಟಗರು ಹವಾ, ಅಬ್ಬರ, ಘರ್ಜನೆ, ಹಾವಳಿ ಬಲು ಜೋರಾಗಿದೆ. ಮಚ್ಚು-ರೊಚ್ಚು-ಕೊಚ್ಚು ಎಂಬ ಮಾತಿನಂತೆ ಪ್ರೇಕ್ಷಕರನ್ನ ರಂಜಿಸುತ್ತಿದೆ.

ಈ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿರುವುದು ಚಿತ್ರದ ಸ್ಕ್ರೀನ್ ಪ್ಲೇ, ಹಿನ್ನೆಲೆ ಸಂಗೀತ ಮತ್ತು ಪಂಚಿಂಗ್ ಡೈಲಾಗ್ಸ್. ಅದರಲ್ಲೂ ಮಂಜು ಮಾಸ್ತಿ ಅವರು ಬರೆದಿರುವ ಸಂಭಾಷಣೆಯಂತೂ ಈಗ ಟಾಕ್ ಆಫ್ ದಿನ ಟೌನ್ ಆಗಿದೆ. ಮಂಜು ಮಾಸ್ತಿ ಜೊತೆಯಲ್ಲಿ ನಿರ್ದೇಶಕ ಸೂರಿ ಕೂಡ ಜೈ ಜೋಡಿಸಿದ್ದು, ‘ಟಗರು’ ತುಂಬ ಜಬರ್ ದಸ್ತ್ ಡೈಲಾಗ್ ಗಳನ್ನ ಕೊಟ್ಟಿದ್ದಾರೆ.

ಡೈಲಾಗ್ ನಂ. 1

”ನಾನು ಸಾಮಾನ್ಯವಾಗಿ ಸೋಲಲ್ಲ. ಅಕಸ್ಮಾತ್ ಸೋತರೂ ಮ್ಯಾನ್ ಆಫ್ ದಿ ಮ್ಯಾಚ್ ನಮ್ದೆ…”

ಡೈಲಾಗ್ ನಂ. 2

”ನಾವು ಕುಂತ್ರೆನೇ ಫುಲ್ ಬಾಟ್ಲು ಹೊಡಿತಿವೀ. ಇನ್ನು ನಿಂತ್ರೆ ಬಿಡ್ತೀವಾ…”

ಡೈಲಾಗ್ ನಂ. 3

”ನೀವೆಲ್ಲ ಫಂಕ್ಷನ್ ಗೆ ಬರೋ ಅತಿಥಿಗಳು ಇದ್ದ ಹಾಗೆ, ಬಂದ್ವಾ, ತಿಂದ್ವಾ ಹೋಗ್ತಾ ಇರಬೇಕು…”

ಡೈಲಾಗ್ ನಂ. 4

”ಚರ್ಮದ ಮೇಲೆ ಚಿತ್ರಕಲೇ….ನೀನೇನೂ ಸಾಂಸ್ಕೃತಿಕ ರಾಯಭಾರಿನಾ..”

ಡೈಲಾಗ್ ನಂ. 5

”ಗಡ್ಡ ಮೀಸೆ ಬಿಟ್ಟೋರೆಲ್ಲ ದೊಡ್ಡ ಗಂಡಸ್ರು ಅಂದ್ರೆ, ಕರಡಿನೂ ದೊಡ್ಡ ಗಂಡ್ಸೇ….”

Facebook Auto Publish Powered By : XYZScripts.com