ಟಗರು ಚಿತ್ರ ಫಸ್ಟ್ ಡೇ ಫಸ್ಟ್ ಶೋ ನೋಡಲಿರುವ ಪುನೀತ್… ಯಾವ ಚಿತ್ರ ಮಂದಿರ?,.. ಇಲ್ಲಿ ಓದಿ

‘ಟಗರು’ ಸಿನಿಮಾದ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಸಿನಿಮಾ ಇದೇ ಶುಕ್ರವಾರ ಅಂದರೆ ನಾಳೆ ರಿಲೀಸ್ ಆಗಲಿದ್ದು ‘ಟಗರು’ ಅಬ್ಬರ ನೋಡುವುದಕ್ಕೆ ಒಂದೇ ಒಂದು ದಿನ ಬಾಕಿ ಇದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೆ ಸ್ಟಾರ್ ನಟರು ಕೂಡ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಪುನೀತ್ ಮಾತ್ರವಲ್ಲದೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ತಮ್ಮ ಸ್ನೇಹಿತ ಶಿವಣ್ಣನ ‘ಟಗರು’ ಸಿನಿಮಾಗೆ ಶುಭಾಶಯ ಕೋರಿದ್ದಾರೆ. ನಿರ್ದೇಶಕರಾದ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್ ಸಹ ಚಿತ್ರಕ್ಕೆ ವಿಶ್ ಮಾಡಿದ್ದರು.

ನಟ ಪುನೀತ್ ರಾಜ್ ಕುಮಾರ್ ಚಿತ್ರ ನೋಡುವ ತವಕದಲ್ಲಿ ಇದ್ದಾರೆ. ಪುನೀತ್ ರಾಜ್ ಕುಮಾರ್ ‘ಟಗರು’ ಸಿನಿಮಾವನ್ನು ಫಸ್ಟ್ ಡೇ ಉರ್ವಶಿ ಚಿತ್ರಮಂದಿರದಲ್ಲಿ ನೋಡಲಿದ್ದಾರೆ. ಅಣ್ಣನ ಸಿನಿಮಾವನ್ನು ಪುನೀತ್ ಮೊದಲ ದಿನವೇ ನೋಡುವ ಪ್ಲಾನ್ ಮಾಡಿದ್ದಾರೆ. ಅಂದು ತಮ್ಮ ಎಲ್ಲ ಸಿನಿಮಾ ಕೆಲಸಗಳ ಜಂಜಾಟಗಳನ್ನು ಬಿಟ್ಟು ಸಿನಿಮಾವನ್ನು ಏಂಜಾಯ್ ಮಾಡಲಿದ್ದಾರೆ.

 

Facebook Auto Publish Powered By : XYZScripts.com