ಟಗರು ಚಿತ್ರ ನೋಡಲು ದುಬೈನಿಂದ ಬರಲಿದ್ದಾರೆ ಶಿವಣ್ಣನ ಅಭಿಮಾನಿಗಳು

 ಸೂರಿ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಟಗರು ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ವಿದೇಶಗಳಲ್ಲೂ ಹವಾ ಎಬ್ಬಿಸಿದೆ.

ದುಬೈನಲ್ಲಿರುವ ಶಿವಣ್ಣ ಫ್ಯಾನ್ಸ್ ಕ್ಲಬ್ ಮತ್ತು ಹ್ಯಾಟ್ರಿಕ್ ಶಿವರಾಜ್ ಕುಮಾರ್ ಗ್ರೂಪ್ ಗಳು ಟಗರು ಚಿತ್ರದ ಬಗ್ಗೆ ತಮ್ಮ ಅಭಿಮಾನವನ್ನು ಕಾರು ರ್ಯಾಲಿ ಮೂಲಕ ತೋರಿಸಿದ್ದಾರೆ.

ದುಬೈನಲ್ಲಿ ಕಾರುಗಳ ಮೇಲೆ ಟಗರು ಪೋಸ್ಟರ್ ಗಳನ್ನು ಅಂಟಿಸಿ ರ್ಯಾಲಿ ಮಾಡಿದ್ದಾರೆ. ಅಲ್ಲದೇ, ಸುಮಾರು 25 ರಿಂದ 30 ಅಭಿಮಾನಿಗಳು ಟಗರು ಸಿನಿಮಾ ನೋಡಲು ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ. ಟಗರು ಚಿತ್ರ ಮೊದಲ ದಿನ ಮೊದಲ ಶೋ ನೋಡಬೇಕೆಂಬುದು ನಮ್ಮ ಆಸೆ, ಅದಕ್ಕಾಗಿ ನಾವು ಭಾರತಕ್ಕೆ ಬರುತ್ತಿದ್ದೇವೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

Facebook Auto Publish Powered By : XYZScripts.com