ಟಗರು ಚಿತ್ರದ ಯಶಸ್ಸನ್ನು ಅಭಿಮಾನಿಗಳು ಹೇಗೆ ಸಂಭ್ರಮಿಸುತ್ತಿದ್ದಾರೆ?… ಇಲ್ಲಿ ಓದಿ

ಶಿವರಾಜಕುಮಾರ್ ಅವರ “ಟಗರು’ ಚಿತ್ರಕ್ಕೆ ಅಭಿಮಾನಿಗಳ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆ ಖುಷಿಯನ್ನು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಇತ್ತೀಚೆಗೆ ಅಭಿಮಾನಿಗಳು ಮೆರವಣಿಗೆ ಮೂಲಕ ಬಂದು “ಟಗರು’ ಖುಷಿಯನ್ನು ಹಂಚಿಕೊಂಡರು.

ಜೊತೆಗೆ ಅನ್ನದಾನ ಕೂಡಾ ಏರ್ಪಡಿಸಿ, ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ಶಿವರಾಜಕುಮಾರ್ ಅವರನ್ನು ಕಂಡು ಖುಷಿಯಾದ ಅಭಿಮಾನಿಗಳು “ಶಿವಣ್ಣನಿಗೆ ಜೈ, ಟಗರು ಸೂಪರ್’ ಎನ್ನುತ್ತಾ ಸಂತಸಪಟ್ಟರು.

ಸದ್ಯ ಶಿವಣ್ಣ ಅಭಿನಯದ “ಟಗರು’ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಳ್ಳುವ ಮೂಲಕ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದು, ಸೂರಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶಿವಣ್ಣ, ಧನಂಜಯ್, ವಸಿಷ್ಠ, ಭಾವನಾ, ಮಾನ್ವಿತಾ ಹರೀಶ್ ನಟಿಸಿದ್ದಾರೆ.

Facebook Auto Publish Powered By : XYZScripts.com