ಟಗರು ಚಿತ್ರದ ಬಗ್ಗೆ ಬಿಗ್ ಬಾಸ್ ಬೇಬಿ ಡಾಲ್ ನಿವೇದಿತಾ ಗೌಡ ಹೇಳಿದ್ದೇನು.. ಇಲ್ಲಿ ಓದಿ

ಫೆ.23 ರಂದು ಶಿವಣ್ಣ ಅಭಿಮಾನಿಗಳಿಗೆ ಒಂದು ರೀತಿಯ ಹಬ್ಬ, ಯೆಸ್, ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಗರು’ ಫೆ.234 ರಂದು ತೆರೆಗೆ ಬರುತ್ತಿದ್ದು, ಸಿನಿಮಾವನ್ನು ಕಣ್ತುಂಬಿಕೊಳ್ಳಲು ಬರೀ ಕರ್ನಾಟಕದಲ್ಲಿ ಮಾತ್ರವಲ್ಲ. ವಿದೇಶಗಳಲ್ಲೂ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಫೆ.23 ರಾಜ್ಯದಾದ್ಯಂತ ‘ಟಗರು’ಸಿನಿಮಾ ತೆರೆಗೆ ಬರುತ್ತಿದ್ದು, ಈ ಸಿನಿಮಾವನ್ನು ನೋಡಲು ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ ಕಾತುರರಾಗಿದ್ದಾರೆ. “ಫೆ.23 ರಂದು ಟಗರು ಸಿನಿಮಾ ರಿಲೀಸ್ ಆಗುತ್ತಿದೆ. ಆದ್ದರಿಂದ ನಾನಂತೂ ತುಂಬಾ ಖುಷಿಯಲ್ಲಿದ್ದೇನೆ, ಯಾಕಂದ್ರೆ ನನ್ನ ಫೇವರೇಟ್ ನಟ ಶಿವರಾಜ್ ಕುಮಾರ್. 23 ಯಾವಾಗ ಬರುತ್ತೋ ಎಂದು ಕಾಯ್ತಾ ಇದ್ದೇನೆ. ಚಿತ್ರತಂಡಕ್ಕೆ ಶುಭಾಶಯಗಳು” ಎಂದು ಸೆಲ್ಪಿ ವಿಡಿಯೋ ಮೂಲಕ ನಿವೇದಿತಾ ಹೇಳಿದ್ದಾರೆ.

ದುನಿಯಾ ಸೂರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಟಗರು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಹರಿಪ್ರಿಯಾ, ಮಾನ್ವಿತಾ ಹರೀಶ್ ತೆರೆ ಹಂಚಿಕೊಂಡಿದ್ದಾರೆ.

Facebook Auto Publish Powered By : XYZScripts.com