ಟಗರು ಚಿತ್ರದ ಬಗ್ಗೆ ನಟ ಸುದೀಪ್ ಹೇಳಿದ್ದೇನು?.. ಇಲ್ಲಿ ಓದಿ

ಚಿತ್ರದ ಪ್ರತಿ ಪಾತ್ರವೂ ಪ್ರೇಕ್ಷಕರನ್ನು ಗೊಂದಲಕ್ಕೆ ತಳ್ಳುತ್ತದೆ . ಈ ಕೆಲಸವನ್ನು ಸೂರಿ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ . ಚಿತ್ರದ ಪಾತ್ರ , ಪಾತ್ರಕ್ಕೆ ತಕ್ಕಂತ ನಟ , ನಟಿಯರು , ಲೊಕೇಶನ್ ಆಯ್ಕೆ ಎಲ್ಲದರಲ್ಲೂ ಸೂರಿ ಸೈ ಎನಿಸಿಕೊಂಡಿದ್ದಾರೆ ಇದನ್ನು ಮಾಡಲು ಅವರಿಂದ ಮಾತ್ರ ಸಾಧ್ಯ ಎಂದು ಸುದೀಪ್ ಹೊಗಳಿದ್ದಾರೆ .

ಪಾತ್ರಗಳ ಹೆಸರನ್ನು ಪ್ರೇಕ್ಷಕರು ಮರೆಯಬಾರದು ಎಂಬ ಉದ್ದೇಶದಿಂದ ಸೂರಿ ಪ್ರಮುಖ ಪಾತ್ರಗಳಿಗೆ ಡಾಲಿ , ಚಿಟ್ಟೆ , ಕಾಕ್ರೋಚ್ , ಡಾನ್ ಅಂಕಲ್ ಎಂದು ಹೆಸರು ನೀಡಿ ಆ ಹೆಸರುಗಳು ಹಾಗೂ ಪಾತ್ರಗಳು ಜನರ ಮನಸ್ಸಿನಲ್ಲಿ ಯಾವಾಗಲೂ ಇರುವಂತೆ ಮಾಡಿದ್ದಾರೆ .

ಶಿವರಾಜ್ ಕುಮಾರ್ ಎನರ್ಜಿ ಎಂದಿಗೂ ಕಡಿಮೆಯಾಗುವುದಿಲ್ಲ . ಡಾಲಿ ಧನಂಜಯ್ ಲುಕ್ ಈ ಸಿನಿಮಾದಲ್ಲಿ ತುಂಬ ಚೆನ್ನಾಗಿದೆ . ಇನ್ನು ಚಿಟ್ಟೆ ವಸಿಷ್ಠಸಿಂಹ ಧ್ವನಿ ಹಾಗೂ ನಟನೆ ಎಲ್ಲರನ್ನು ಸೆಳೆಯುತ್ತದೆ . ಸಿನಿಮಾದ ಸಂಗೀತ ಬಹಳ ಚೆನ್ನಾಗಿದೆ ಎಂದು ಸಂಗೀತ ನಿರ್ದೇಶಕ ಚರಣ್ ರಾಜ್ ರನ್ನು ಹೊಗಳಿದ್ದಾರೆ . ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸಿದ ಚಿತ್ರತಂಡದ ಪ್ರತಿಯೊಬ್ಬರಿಗೂ ಶುಭಾಶಯ ಎಂದು ಸುದೀಪ್ , ಚಿತ್ರದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ನಟ ಸುದೀಪ್ ಚಿತ್ರವನ್ನು ಹೊಗಳಿ ತಮ್ಮ ಟ್ವೀಟರ್ ನಲ್ಲಿ ವಿಮರ್ಶೆ ಬರೆದಿದ್ದಾರೆ .

Facebook Auto Publish Powered By : XYZScripts.com