ಟಗರು ಚಿತ್ರದ ‘ನಕ್ಕನ್ ಹವಾ ಬೆಳೆಸೋ ಅಂದ್ರೇ, ಗಡ್ಡ ಬೆಳಸ್ತಾ ಅವ್ನೇ’ ಈ ಡೈಲಾಗ್ ಯಾರ ಬಗ್ಗೆ ಹೇಳಿರೋದು?

ಟಗರು…!! ಮೈ ತುಂಬ ಪೊಗರು.. ಹೌದು, ಎಲ್ಲಿ ನೋಡಿದರೂ, ಯಾರ ಬಾಯಿಯಲ್ಲಿ ಕೇಳಿದ್ರು ಟಗರಿನ ಪೊಗರು ಮಾತು.. ಬಿಡುಗಡೆಯಾಗಿ ಸ್ವಲ್ಪ ಹೊತ್ತಿಗೆ ಟಗರು ಹವಾ ಎಲ್ಲೆಡೆ ಹರಡಿತು. ಭೈರತಿ ರಣಗಲ್ ಹವಾ ಬೆನ್ನಲ್ಲೇ ಟಗರು ಫಿವರ್ ಮುಂದುವರೆಯಿತು. ಸೂರಿ ನಿರ್ದೇಶನದ ಸಿನಿಮಾದಲ್ಲಿ ರಾ ಡೈಲಾಗ್ ಗಳು ಇರುವುದು ಸರ್ವೇ ಸಾಮಾನ್ಯ. ಇಂತಹುದೇ ಡೈಲಾಗ್ ಬೇರೆಯೊಂದು ಸ್ವರೂಪ ಪಡೆದುಕೊಂಡಿದೆ.

ಇನ್ನೂ ಯಶ್ ಹಾಗೆ ಶಿವಣ್ಣನ ಸ್ನೇಹದ ಬಗ್ಗೆ ನಿಮಗೆಲ್ಲ ಬಿಡಿಸಿ ಹೇಳಬೇಕಿಲ್ಲ. ಯಶ್ ಶಿವಣ್ಣನೊಂದಿಗೆ ತೀರ ಹತ್ತಿರದ ಸ್ನೇಹವನ್ನ ಹೊಂದಿದ್ದಾರೆ. ಹೀಗಿರೋವಾಗ ಯಶ್ ಗೆ ತನ್ನ ಸಿನಿಮಾದಲ್ಲಿ ಇಂತಹ ಡೈಲಾಗ್ ಹೇಳಲು, ಹೇಳಿಸಲು ಸಾಧ್ಯವಿಲ್ಲ.

ಆದರೆ, ಗಡ್ಡದ ಡೈಲಾಗ್ ಸ್ಟಾರ್ ನಟನಿಗೆ ಟಾಂಗ್ ಕೊಡಲಾಗಿದೆ ಎನ್ನಲಾಗುತ್ತಿದೆ. ಇದು ಎಷ್ಟು ನಿಜ ಎನ್ನುವ ಮೊದಲೇ ಫೇಸ್‌ಬುಕ್‌ ನಲ್ಲಿ ಕಿಡಿ ಹಚ್ಚಿಕೊಂಡಿದೆ‌. ‘ನಕ್ಕನ್ ಹವಾ ಬೆಳೆಸೋ ಅಂದ್ರೇ, ಗಡ್ಡ ಬೆಳಸ್ತಾ ಅವ್ನೇ’ ಈ ಡೈಲಾಗ್ ಯಶ್ ಅವರಿಗೆ ಹೇಳಲಾಗಿದೆ ಎಂದು ಫೇಸ್‌ಬುಕ್‌ ನಲ್ಲಿ ಹಬ್ಬಿಸಲಾಗ್ತಿದೆ.

ಇನ್ನೂ ನಿರ್ದೇಶಕರಾದ ಸೂರಿ ಇಂತಹ ಕೆಳ ಮಟ್ಟದ ನಿರೂಪಣೆಗೆ ಆಸ್ಪದ ನೀಡಿದವರಲ್ಲ ಅನ್ನೋದನ್ನ ನಾವಿಲ್ಲಿ ಗಮನಿಸಬೇಕು

Facebook Auto Publish Powered By : XYZScripts.com