ಟಗರು ಚಿತ್ರದ ಧನಂಜಯ ದರ್ಶನ್ ವಿರೋಧಿ?.. ಮಾಹಿತಿಗಾಗಿ ಇಲ್ಲಿ ಓದಿ

ಸದ್ಯ “ಟಗರು’ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಕೇಳಿಬರುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಖುಷಿಯಾಗಿರುವ ಧನಂಜಯ್, ನಾಳೆಯಿಂದ “ಯಜಮಾನ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಮೈಸೂರಿಗೆ ಹೊರಟಿದ್ದಾರೆ. ದರ್ಶನ್ ಅವರೆದುರು ನಟಿಸುವುದಕ್ಕೆ ಎಕ್ಸೆ„ಟ್ ಆಗಿರುವ ಅವರು, “ಆ ಚಿತ್ರದಲ್ಲಿ ಹಳ್ಳಿಯಲ್ಲಿ ದರ್ಶನ್ ಅವರ ವಿರೋಧಿಯ ಪಾತ್ರವನ್ನು ನಾನು ಮಾಡುತ್ತಿದ್ದೇನೆ.

ಯಾವಾಗ “ಯಜಮಾನ’ ಚಿತ್ರದಲ್ಲಿ ಧನಂಜಯ್ ನಟಿಸುತ್ತಿದ್ದಾರೆ ಎಂದು ಸುದ್ದಿಯಾಯಿತೋ, ಆಗಿಂದ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಇಷ್ಟಕ್ಕೂ ಚಿತ್ರದಲ್ಲಿ ಧನಂಜಯ್ ಅವರ ಪಾತ್ರವೇನು ಎಂದರೆ, “ವಿಲನ್ ಅನ್ನೋಕ್ಕಿಂತ ವಿರೋಧಿಯ ಪಾತ್ರ’ ಎನ್ನುತ್ತಾರೆ ಅವರು.

ವಿಲನ್ ಎನ್ನುವುದಕ್ಕಿಂತ ಸ್ವಲ್ಪ ನೆಗೆಟಿವ್ ಶೇಡ್ ಇರುವ ಪಾತ್ರ ಅದು. ಯಾಕೆ ವಿರೋಧ ಮಾಡುತ್ತೀನಿ ಎನ್ನುವುದನ್ನು ಚಿತ್ರದಲ್ಲೇ ನೋಡಬೇಕು’ ಎನ್ನುತ್ತಾರೆ ಅವರು.

Facebook Auto Publish Powered By : XYZScripts.com