ಟಗರು ಚಿತ್ರದ ಡಬ್ಬಿಂಗ್ ಹಕ್ಕುಗಳಿಗೆ ಬಿಡುಗಡೆಗೂ ಮುನ್ನವೇ ಭಾರಿ ಬೇಡಿಕೆ!

ಶಿವರಾಜ್ ಕುಮಾರ್ ಅಭಿನಯದ ಸೂರಿ ನಿರ್ದೇಶನದ ಟಗರು ಚಿತ್ರ ಬಿಡುಗಡೆಯಾಗಲು ಇನ್ನೊಂದು ತಿಂಗಳು ಬಾಕಿಯಿರುವಾಗಲೇ ಗಮನ ಸೆಳೆಯಲು ಆರಂಭಿಸಿದೆ. ಹಿಂದಿ ಮತ್ತು ತೆಲುಗಿಗೆ ಡಬ್ ಮಾಡಲು ಹಕ್ಕುಗಳಿಗಾಗಿ ನಮಗೆ ಮನವಿ ಬಂದಿದ್ದು ಗಣನೀಯ ಬೆಲೆಗೆ ಚಿತ್ರದ ಡಬ್ ಹಕ್ಕಿನ ಮಾರಾಟ ಮಾಡಲಾಗುವುದು ಎನ್ನುತ್ತಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.

ಬೇರೆ ಭಾಷೆಗಳ ಚಿತ್ರ ನಿರ್ಮಾಪಕರು ಈಗಾಗಲೇ ನಿರ್ಮಾಪಕ ಶ್ರೀಕಾಂತ್ ಅವರನ್ನು ಭೇಟಿ ಮಾಡಿದ್ದಾರೆ. ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ ನಿರ್ದೇಶಕ ಸೂರಿ ಹಾಗೂ ನಟ ಶಿವರಾಜ್ ಕುಮಾರ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಟಗರು ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ತಂತ್ರಜ್ಞರು ಇನ್ನೂ ಕೆಲಸದಲ್ಲಿ ನಿರತರಾಗಿದ್ದಾರೆ.

ಈ ಮಧ್ಯೆ ಚಿತ್ರದ ಹಾಡಿನ ಸಾಹಿತ್ಯದ ವಿಡಿಯೊ ಬೇಡಿಕೆಯ ಪಟ್ಟಿಯಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು ಚರಣ್ ರಾಜ್ ಸಂಯೋಜನೆಯ ಹಾಡುಗಳನ್ನು ಜನರು ಈಗಾಗಲೇ ಇಷ್ಟಪಟ್ಟಿದ್ದಾರೆ.

ಈ ವರ್ಷದ ಬಹು ನಿರೀಕ್ಷಿತ ಚಿತ್ರ ಟಗರುನಲ್ಲಿ ಮಾನ್ವಿತಾ ಹರೀಶ್, ಭಾವನಾ, ವಶಿಷ್ಟ ಸಿಂಹ, ಅನಿತಾ ಭಟ್ ಮತ್ತು ಧನಂಜಯ್ ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Facebook Auto Publish Powered By : XYZScripts.com