ಟಗರು ಚಿತ್ರದ ಎರಡು ದಿನಗಳ ಟಿಕೆಟ್ ಸೋಲ್ಡ್ ಔಟ್.. ಸಂಪೂರ್ಣ ಮಾಹಿತಿ ಇಲ್ಲಿ ಓದಿ

ಬಹು ನಿರೀಕ್ಷಿತ ಹಾಗೂ ಇತಿಹಾಸ ನಿರ್ಮಿಸಲು ತೆರೆಗೆ ಬರುತ್ತಿರುವ ‘ಟಗರು’ ಸಿನಿಮಾ ತೆರೆಗೆ ಬರಲು ಇನ್ನೇನು ಮೂರು ದಿನಗಳು ಮಾತ್ರ ಬಾಕಿ ಇವೆಯಷ್ಟೇ. ಈಗಾಗಲೇ ‘ಟಗರು’ ಮೇಲಿನ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗಿದ್ದು, ಅಭಿಮಾನಿಗಳ ಕಾತುರ ಮುಗಿಲು ಮುಟ್ಟಿದೆ. ದುನಿಯಾ ಸೂರಿ ಹಾಗೂ ಶಿವಣ್ಣ ಕಾಂಭಿನೇಷನ್ನಿನ ದ್ವಿತಿಯ ಚಿತ್ರವಿದು. ಇಲ್ಲಿ ಶಿವಣ್ಣ ಖಡಕ್ ಪೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡರೆ, ನಟ ಧನಂಜಯ ಹಾಗೂ ವಸಿಷ್ಟ ಸಿಂಹ ಖಳ ನಟರಾಗಿ ಖದರ್ ತೋರಿಸಲಿದ್ದಾರೆ. ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ ಅಭಿನಯಿಸಿದ್ದಾರೆ.

ಟಗರು ಚಿತ್ರ ಇದೇ ವಾರ ಸುಮಾರು 400 ಚಿತ್ರಗಳಲ್ಲಿ ಮೇಲೆ ರಾರಾಜಿಸಲಿದೆ. ಶಿವಣ್ಣನ ಈ ಚಿತ್ರವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಬೆಳಿಗ್ಗೆ ಬೆಳಿಗ್ಗೆಯೆ ಥಿಯೇಟರ್ ನತ್ತ ಮುಖ ಮಾಡಲಿದ್ದಾರೆ ಅಭಿಮಾನಿಗಳು. ಆಲ್ ಮೋಸ್ಟ್ ಪಿವಿಆರ್, ಇನಾಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿನ ಎರಡು ದಿನಗಳ ಎಲ್ಲಾ ಶೋಗಳ ಟಿಕೇಟ್ ಗಳು ಈಗಾಗಲೇ ಸೋಲ್ಟ್ ಔಟ್ ಆಗಿವೆ. ಇಷ್ಟೊಂದು ಹೈಪ್ ಕ್ರಿಯೇಟ್ ಆಗಲು ಕಾರಣ ಶಿವಣ್ಣ ಹಾಗೂ ದುನಿಯಾ ಸೂರಿ ಕಾಂಭಿನೇಷನ್ ಅಂತಾನೇ ಹೇಳಬಹುದು. ಇವರಿಬ್ಬರ ಕಾಂಭಿನೇಷನಿನಲ್ಲಿ ಬಂದಿದ್ದ ‘ಕಡ್ಡಿಪುಡಿ’ ಚಿತ್ರ ಬಾಕ್ಸ್ ಆಪೀಸ್ ನಲ್ಲಿ ಧೂಳ್ ಎಬ್ಬಿಸಿತ್ತು. ಮತ್ತೆ ಇದೇ ಜೋಡಿ ಮತ್ತದೇ ಮೋಡಿ ಮಾಡುವ ಸೂಚನೆ ಕೊಟ್ಟಿದೆ.

Facebook Auto Publish Powered By : XYZScripts.com