ಟಗರಿನ ಪೊಗರಿಗೆ ಯೋಗಿ ದುನಿಯಾ ಹೆದರಿತಾ?

ಲೂಸ್ ಮಾದ ಯೋಗಿಶ್ ಅಭಿನಯದ ‘ದುನಿಯಾ 2’ ಸಿನಿಮಾದ ಟೈಟಲ್ ಈಗ ‘ಯೋಗಿ ದುನಿಯಾ’ ಎಂದು ಬದಲಾಗಿದೆ. ಚಿತ್ರದ ಬಿಡುಗಡೆಗೆ ಇದ್ದ ಎಲ್ಲ ಸಮಸ್ಯೆಗಳು ನಿವಾರಣೆ ಆಗಿದ್ದು, ಫೆಬ್ರವರಿ 23ಕ್ಕೆ ಈ ಸಿನಿಮಾವನ್ನು ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡದ್ದಾಗಿತ್ತು. ಆದರೆ ಈಗ ಸಿನಿಮಾದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

ಶಿವರಾಜ್ ಕುಮಾರ್ ಅವರ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಟಗರು’ ಫೆಬ್ರವರಿ 23ಕ್ಕೆ ರಿಲೀಸ್ ಆಗಲಿದೆ. ಈ ಕಾರಣದಿಂದ ಅಂದು ಬೇರೆ ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಈಗ ‘ಯೋಗಿ ದುನಿಯಾ’ ಸಿನಿಮಾ ಕೂಡ ಅದೇ ಕಾರಣಕ್ಕೆ ಮುಂದೆ ಹೋಗಿದೆ.

ಅಂದಹಾಗೆ, ಹತ್ತು ವರ್ಷದ ಹಿಂದೆ ‘ದುನಿಯಾ’ ಸಿನಿಮಾ ಕೂಡ ಫೆಬ್ರವರಿ 23ಕ್ಕೆ ರಿಲೀಸ್ ಆಗಿತ್ತು. ಆ ಸಿನಿಮಾದ ಮೂಲಕ ನಟ ಯೋಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇದೇ ಕಾರಣಕ್ಕೆ ‘ಯೋಗಿ ದುನಿಯಾ’ ಕೂಡ ಆ ದಿನವೇ ರಿಲೀಸ್ ಆಗಬೇಕು ಎಂಬುದು ಯೋಗಿ ಆಸೆ ಆಗಿತ್ತು. ಆದರೆ ‘ಟಗರು’ ಚಿತ್ರದಿಂದ ‘ಯೋಗಿ ದುನಿಯಾ’ ಚಿತ್ರ ಒಂದು ತಿಂಗಳು ಮುಂದಕ್ಕೆ ಹೋಗಿದೆ.

‘ಯೋಗಿ ದುನಿಯಾ’ ಸಿನಿಮಾ ಮಾರ್ಚ್ 9ಕ್ಕೆ ರಾಜ್ಯಾದಂತ್ಯ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಲೂಸ್ ಮಾದ ಯೋಗಿ ಮತ್ತು ಹಿತಾ ಚಂದ್ರಶೇಖರ್ ನಟಿಸಿದ್ದಾರೆ. ಹರಿ ನಿರ್ದೇಶನ ಮತ್ತು ಬಿ.ಜೆ.ಭರತ್ ಸಂಗೀತ ನಿರ್ದೇಶನ ಚಿತ್ರದಲ್ಲಿದೆ. ಬೆಂಗಳೂರಿನ ಒಂದು ಏರಿಯಾದ ಒಬ್ಬ ಹುಡುಗನ ಕಥೆಯನ್ನು ಸಿನಿಮಾ ಹೊಂದಿದೆ.

Facebook Auto Publish Powered By : XYZScripts.com