ಜೆಕೆ ಬಾಲಿವುಡ್ ಚಿತ್ರಕ್ಕೆ ನಾಯಕಿ ಯಾರು ಗೊತ್ತಾ?

ಇತ್ತೀಚಿಗೆ ಜೆ.ಕೆಯವರು ಬಾಲಿವುಡ್ ಚಿತ್ರದಲ್ಲಿ ನಟ್ಟಿಸುತ್ತಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿ ಖುಷಿ ತಂದಿತ್ತು ಆದ್ರೆ ಯಾವ ಪಾತ್ರದಲ್ಲಿ ನಟಿಸುತ್ತಾರೆ, ನಾಯಕನ್ ಯಾರಿ ಎಂಬ ಪ್ರಶ್ನೆ ಅವರನ್ನ ಕಾಡುತಿತ್ತು, ಅದಕ್ಕೆ ಈಗ ಉತ್ತರ ದೊರೆತಿದೆ.

ನಟ ಜಯರಾಮ್ ಕಾರ್ತಿಕ್ ಅವರು ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ನಾಯಕಿಯಾಗಿ ಗೌಹರ್ ಖಾನ್ ಫಿಕ್ಸ್ ಆಗಿದ್ದಾರಂತೆ.

ಹಿಂದಿ ಚಿತ್ರರಂಗದ ಹಿರಿಯ ನಿರ್ದೇಶಕರಲ್ಲೊಬ್ಬರಾದ ರಮೇಶ್ ತಲ್ವಾರ್ ಅವರು ಜೆಕೆ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕಿಯಾಗಿ ಹುಡುಕಾಟದಲ್ಲಿದ್ದ ನಿರ್ದೇಶಕರಿಗೆ ಗೌಹರ್ ಸಿಕ್ಕಿದ್ದಾರಂತೆ.

ಇದೊಂದು ಪಕ್ಕಾ ಕಮರ್ಷಿಯಲ್ ಮಾದರಿಯ ಸಿನಿಮಾ. ಚಿತ್ರದಲ್ಲಿ ನಾನೊಬ್ಬ ದೊಡ್ಡ ಉದ್ಯಮಿ. ನನ್ನ ಪತ್ನಿಯಾಗಿ ಗೌಹರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವಂತಹ ಪಾತ್ರ ನನ್ನದು ಎಂದು ಮಾಹಿತಿ ನೀಡಿದ್ದಾರೆ ಜೆಕೆ.

Facebook Auto Publish Powered By : XYZScripts.com