ಜೂನ್ 22 ರಿಂದ ಮತ್ತೆ ‘ಅಂಜನಿ ಪುತ್ರ’ ಶೂಟಿಂಗ್ ನತ್ತ ಪುನೀತ್!

ಸಿನಿಮಾ ಡೆಸ್ಕ್ : ತಾಯಿ ಪಾರ್ವತಮ್ಮ ರಾಜ್ ಕುಮಾರ್ ನಿಧನದ ದುಃಖದಲ್ಲಿದ್ದ ನಟ ಪುನೀತ್ ಚೇತರಿಸಿಕೊಳ್ಖುತ್ತಿದ್ದು, ಮತ್ತೆ ಅಂಜನಿ ಪುತ್ರ ಸಿನಿಮಾದ ಶೂಟಿಂಗ್ ಗೆ ಜೂನ್ 22 ರಂದು ವಾಪಸ್ ಆಗಲಿದ್ದಾರೆ.

ಅಂಜನಿಪುತ್ರ ಸಿನಿಮಾಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳ್ತಾ ಇದ್ದು, ಸಿನಿಮಾದಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾದ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಐಟಂ ಸಾಂಗ್ ಗೆ ಹರಿಪ್ರಿಯಾ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದಲ್ಲಿ ಬಹುಭಾಷಾ ನಟಿ ರಮ್ಯಾಕೃಷ್ಣ ಕೂಡ ಒಂದು ಪಾತ್ರವನ್ನು ಮಾಡಲಿದ್ದಾರೆ.

ಎಂ.ಎನ್.ಕೆ ಮೂವೀಸ್ ಅಡಿಯಲ್ಲಿ ಎಂ.ಎನ್.ಕುಮಾರ್ ಮತ್ತು ಜಯಶ್ರೀ ದೇವಿ ಈ ಚಿತ್ರವನ್ನ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಹುಟ್ಟಿದೆ.

Courtesy: kannada news now

Facebook Auto Publish Powered By : XYZScripts.com