ಜಾನುವಾರುಗಳ ರಕ್ಷಣೆಯತ್ತ ಯಶ್, ಕೊಳ್ಳೇಗಾಲದಲ್ಲಿ ಏನು ಮಾಡಿದ್ರು ಗೊತ್ತಾ?

ಚಾಮರಾಜನಗರ:ರಾಕಿಂಗ್ ಸ್ಟಾರ್ ಯಶ್, ಈ ಬಾರಿ ಜಾನುವಾರುಗಳ ನೋವಿಗೆ ಸ್ಪಂದಿಸುವಂತೆ ತಮ್ಮ ಯಶೋಮಾರ್ಗದ ಮೂಲಕ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಜಾನುವಾರುಗಳು ಮೇವಿನ ಕೊರತೆಯಿಂದ ನರಳುತ್ತಿರುವುದನ್ನು ಮಾಧ್ಯಮಗಳ ಮುಖಾಂತರ ನನ್ನ ಗಮನಕ್ಕೆ ಬಂದಿದ್ದು, ಯಶೋಮಾರ್ಗದ ಒಂದು ತಂಡದಿಂದ ಕೊಳ್ಳೇಗಾಲ ತಾಲೂಕಿನ ತಳಮಟ್ಟದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿಯನ್ನು ಅಧ್ಯಯನ ಮಾಡಿದೆ ಎಂದು ಯಶ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಗೋಶಾಲೆಗಳನ್ನು ತೆರೆದಿದ್ದು, ಈ ಮೂಲಕ ಮೇವು ಸರಬರಾಜು ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಈ ಭಾಗದ ಜಾನುವಾರುಗಳಿಗೆ ಧ್ಯಾನ್ ಫೌಂಡೇಶನ್ ಹಾಗೂ ರಾಮಚಂದ್ರಪುರ ಮಠದ ವತಿಯಿಂದ ಸಾವಿರಾರು ಟನ್ಗಟ್ಟಲೇ ಮೇವು ಸರಬರಾಜು ಮಾಡುತ್ತಿರುವ ಎರಡು ಸಂಸ್ಥೆಯ ಕಾರ್ಯಕ್ಕೆ ಯಶ್ ಇದೇ ವೇಳೆ ಅಭಿನಂದಿಸಿದ್ದಾರೆ.

ಇದೇ ವೇಳೇ ಅವರು ಎರಡು ಪ್ರದೇಶದಲ್ಲಿನ ಗೋವುಗಳ ಉಳಿವಿಗಾಗಿ ಸರಬರಾಜಾಗುತ್ತಿರುವ ಮೇವು ಸಾಲದಾಗಿದ್ದು, ಹಸುವಿನಿಂದ ನರಳುತ್ತಿರುವ ಜಾನುವಾರುಗಳು ಹಾಗೂ ಅವುಗಳ ಉಳಿವಿಗಾಗಿ ಮನವಿ ಮಾಡುತ್ತಿರುವ ರೈತರ ನೋವಿಗೆ ಸ್ಪಂದಿಸುವಂತೆ ಚಾಮರಾಜನಗರ ಕ್ಷೇತ್ರದ ಸಂಸದ ಧೃವನಾರಯಣ್ ಹಾಗೂ ಪಶು ಸಂಗೋಪನ ಸಚಿವ ಎ ಮಂಜು ಅವರೊಂದಿಗೆ ಮಾತನಾಡಿದ್ದು, ಅವರು ಯಾವೊಂದು ಜಾನುವಾರುಗಳು ಹಸಿವಿನಿಂದ ಸಾಯಲು ಬಿಡುವುದಿಲ್ಲವೆಂದು ಸಕಾರಾತ್ಮಕವಾಗಿ ಭರವಸೆ ನೀಡಿದ್ದಾರೆ.

ಭಾದಿತವಾಗಿರುವ ಗ್ರಾಮಗಳಿಗೆ ಶೀಘ್ರದಲ್ಲಿ ಹೆಚ್ಚಿನ ನೆರವು ತಲುಪುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

Kannada news now

Facebook Auto Publish Powered By : XYZScripts.com