ಜನ್ಮದಿನದ ಸಂಭ್ರಮದಲ್ಲಿ ಚ್ಯಾಲೆಂಜಿಂಗ್ ಸ್ಟಾರ್

ಕನ್ನಡ ಸಿನಿಮಾರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ . ಸುಮಾರು ಒಂದು ತಿಂಗಳಿಂದಲೇ ಅಭಿಮಾನಿಗಳು ಈ ದಿನಕ್ಕಾಗಿ ಕಾದಿದ್ದರು. ಬರ್ತಡೇಗಾಗಿ ಜಾತ್ರೆಯ ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದರು. ನಿನ್ನೆ ರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ದರ್ಶನ್ ಅವರ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ನಿವಾಸದ ಬಳಿ ಬಂದು ಕಾದು ಕುಳಿತಿದ್ದಾರೆ.

ಮಧ್ಯರಾತ್ರಿಯಿಂದಲೇ ಅಭಿಮಾನಿಗಳ ಜೊತೆ ಸೇರಿ ಕೇಕ್ ಕತ್ತರಿಸಿರುವ ಡಿ ಬಾಸ್ ಇಂದು(ಫೆ.16) ಪೂರ್ತಿ ಅಭಿಮಾನಿಗಳ ಒಟ್ಟಿಗೆ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಲಿದ್ದಾರೆ. ಈ ವರ್ಷ 41ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ .

ದರ್ಶನ್ ಮನೆ ಮುಂದೆ ಈಗಾಗಲೇ ಕಟೌಟ್ ಬ್ಯಾನರ್ ಗಳು ರಾರಾಜಿಸುತ್ತಿದ್ದು ಡಿ ಉತ್ಸವದ ಹೆಸರಿನಲ್ಲಿ ಅಭಿಮಾನಿಗಳು ಹುಟ್ಟುಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ದರ್ಶನ್ ಅಭಿನಯದ 51ನೇ ಚಿತ್ರದ ಟೈಟಲ್ ಅಧಿಕೃತವಾಗಿ ಬಿಡುಗಡೆ ಆಗಲಿದ್ದು, 53 ನೇ ಸಿನಿಮಾ ಘೋಷಣೆ ಆಗಲಿದೆ.

ಶೈಲಜಾ ನಾಗ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಯಜಮಾನ’ ಸಿನಿಮಾದ ಟೈಟಲ್ ಟೀಸರ್ ಕೂಡ ಇಂದೇ ಬಿಡುಗಡೆ ಮಾಡಲಾಗುತ್ತಿದೆ. ಒಟ್ಟಾರೆ ಈ ಬಾರಿಯ ದರ್ಶನ್ ಅವರ ಹುಟ್ಟುಹಬ್ಬ ಅಭಿಮಾನಿಗಳು ಸಾಕಷ್ಟು ಕಾರಣಗಳಿಗೆ ವಿಶೇಷವಾಗಿದೆ.

Facebook Auto Publish Powered By : XYZScripts.com