ಜಗ್ಗೇಶ್ ಪ್ರಕಾರ ಶಿವಣ್ಣ-ಅಪ್ಪು-ಸುದೀಪ್-ದರ್ಶನ್ ಬದಲಿಸಕೊಳ್ಳಬೇಕಾದ ಗುಣಗಳು ಯಾವುದು? ಇಲ್ಲಿ ಓದಿ

ಪ್ರತಿಯೊಬ್ಬರಿಗೂ ತಮ್ಮದೇ ಆದ ಗುಣಗಳು ಇರುತ್ತೆ. ಆದ್ರೆ, ಅದರಿಂದ ಎಷ್ಟು ಒಳ್ಳೆಯದಾಗುತ್ತೋ ಅಷ್ಟೆ ಕೆಟ್ಟದ್ದು ಕೂಡ ಆಗುತ್ತೆ. ಇದು ಸ್ಯಾಂಡಲ್ ವುಡ್ ಸ್ಟಾರ್ ನಟರ ವಿಚಾರದಲ್ಲೂ ಹೊರತಾಗಿಲ್ಲ. ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಅವರ ಮಾತನಾಡಿದ್ದಾರೆ.

ಇತ್ತೀಚಿಗಷ್ಟೆ ಟಿವಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಜಗ್ಗೇಶ್ ಅವರು ಕನ್ನಡದ ಸ್ಟಾರ್ ನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೇಗೆ ಈ ನಟರು ತಮ್ಮ ಪ್ರತಿಭೆ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಿದ್ದಾರೆ ಎಂಬುದರ ಬಗ್ಗೆ ಸಂತಸ ಪಟ್ಟಿದ್ದಾರೆ.

ಈ ವೇಳೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ದಾಸ ದರ್ಶನ್ ಅವರಲ್ಲಿ ಕೆಲವೊಂದು ಗುಣಗಳನ್ನ ಬದಲಾಯಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಹಾಗಿದ್ರೆ, ಜಗ್ಗೇಶ್ ಅವರ ಪ್ರಕಾರ ಈ ನಟರ ಬಲಿಸಿಕೊಳ್ಳಬಹುದು ಅಂಶಗಳು ಯಾವುದು.? ಎಂದು ತಿಳಿಯಲು ಮುಂದೆ ಓದಿ…..

ಸಾಂಸಾರಿಕ ಸಿನಿಮಾ ಮಾಡಬೇಕು
ಪುನೀತ್ ಅವರಲ್ಲಿ ಜಗ್ಗೇಶ್ ಕಾಣಬಯಸುವ ಗುಣ

”ಪುನೀತ್ ರಾಜ್ ಕುಮಾರ್, ಅವರ ತಂದೆಯ ಪ್ರತಿರೂಪ. ಅವರ ನಡೆ, ನುಡಿ, ವಿನಯ, ಪರರಿಗೆ ತೋರಿಸುವಂತಹ ಗೌರವ, ತಾನೊಬ್ಬ ಸ್ಟಾರ್ ಎಂಬುದನ್ನ ಪಕ್ಕಕ್ಕಿಟ್ಟು ಸಾಮಾನ್ಯ ಪ್ರಜೆಯಾಗಿ ಜೀವಿಸುತ್ತಾರೆ” ಎಂದು ಮೆಚ್ಚಿಕೊಂಡ ಜಗ್ಗೇಶ್,

ಬದಲಾಯಿಸಿಕೊಳ್ಳಬಹುದಾದ ಗುಣ: ”ಡಾ ರಾಜ್ ಕುಮಾರ್ ಅವರಂತೆ ಸಾಂಸಾರಿಕ ಸಿನಿಮಾಗಳ ಕಡೆ ಹೆಚ್ಚಿನ ಒಲವು ತೋರಬೇಕು” ಎಂದು ಬದಲಾವಣೆ ಬಯಸಿದ್ದಾರೆ.

ಸುದೀಪ್ ಜ್ಞಾನದ ಗಣಿ

”ಸುದೀಪ್ ಜ್ಞಾನದ ಗಣಿ. ಅವರಿಗೆ ಎಷ್ಟು ಗೊತ್ತಿದೆ ಅಂದ್ರೆ ಮೋಸ್ಟ್ ಎಜುಕೇಟೆಡ್ ವ್ಯಕ್ತಿ. ಬಟ್ ಎಲ್ಲೂ ತೋರಿಸಿಕೊಳ್ಳಲ್ಲ” ಎಂದು ಜಗ್ಗೇಶ್ ಸಂತಸ ವ್ಯಕ್ತಪಡಿಸಿದರು.

ಬದಲಾಯಿಸಿಕೊಳ್ಳಬಹುದಾದ ಗುಣ: ”ಸುದೀಪ್ ನನ್ನ ಪ್ರಕಾರ ಕೈಗೆ ಸಿಗಲ್ಲ. ಎಲ್ಲರಿಗೂ ಸಿಗಬೇಕು. ಸಾಮಾಜಿಕ ಕಾರ್ಯಗಳಿಗಾಗಿ ಬರಬೇಕು. ಅದೊಂದು ಪರಿವರ್ತನೆ ಆದ್ರೆ, ಅವರೊಬ್ಬ ಮಾಸ್ ಲೀಡರ್ ಆಗ್ತಾರೆ” ಎಂಬ ಆಶ್ವಾಸನೆ ವ್ಯಕ್ತಪಡಿಸಿದರು.

ಶಿವಣ್ಣ ಅವರದ್ದು ಹೆಂಗರುಳು

ಶಿವರಾಜ್ ಕುಮಾರ್ ಅವರದ್ದು ಹೆಂಗರಳು. ಆತನಿಗೆ ತಾಯಿ ಗುಣ. ಪುನೀತ್ ಅವರದ್ದು ತಂದೆಯ ಗುಣ. ಇವರದ್ದು ಕ್ಷಮಾಗುಣ ಎಂದು ಜಗ್ಗೇಶ್ ಖುಷಿಯಾದರು.

ಬದಲಾಯಿಸಿಕೊಳ್ಳಬಹುದಾದ ಗುಣ: ಶಿವರಾಜ್ ಕುಮಾರ್ ಅವರ ಬಳಿ ಭಾವನಾತ್ಮಕವಾಗಿ ಮಾತಾನಾಡಿದ್ರೆ ಕರಗಿ ಹೋಗ್ತಾರೆ. ಇದರ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿಬೇಕು” ಅಷ್ಟೇ ಎಂದರು.

ಎಲ್ಲರ ಜೊತೆ ಬೆರಿಯಬೇಕು

”ದರ್ಶನ್ ಒಂದು ರೀತಿಯಲ್ಲಿ ನನ್ನ ಕ್ಯಾರೆಕ್ಟರ್. ನಾನಾದ್ರು ಸ್ವಲ್ಪ ನೇರ ನುಡಿ ಅಂದು ಬಿಡುತ್ತೇನೆ. ಆದ್ರೆ, ಅವನು ಯಾರಿಗೂ ಏನೂ ಅನ್ನಲ್ಲ. ಒಬ್ಬನೇ ನೋವು ತಿಂತಾನೆ ಒಳಗೆ ಇಟ್ಕೊಂಡು. ನನ್ನ ಪ್ರಕಾರ ಅವನು ಒಪನ್ ಅಪ್ ಆದ್ರೆ, ಅವನು ಕನ್ನಡದ ರಜನಿಕಾಂತ್” ಎಂದು ಭರವಸೆ ಅವರದ್ದು.

ಬದಲಾಯಿಸಿಕೊಳ್ಳಬಹುದಾದ ಗುಣ: ”ದರ್ಶನ್ ಸ್ವಲ್ಪ ಬೆರಿಯಬೇಕು. ಹಿಂಜರಿಯುತ್ತಾರೆ. ಯಾಕಂದ್ರೆ, ನನಗೆ ಅನಿಸಿದ್ದೇನಂದ್ರೆ, ಅವರ ನಡೆಯನ್ನ ಕಾಂಟ್ರವರ್ಸಿ ಮಾಡಿಬಿಡ್ತಾರೆ ಎಂಬ ಬೇಜಾರು ಅವರಲ್ಲಿದೆ” ಎಂದರು.

 

Facebook Auto Publish Powered By : XYZScripts.com