ಚುನಾವಣಾ ಆಖಾಡಕ್ಕೆ ಧುಮುಕಿದ ನಿರ್ದೇಶಕ ಯೋಗರಾಜ್ ಭಟ್ಟರು!

ರಾಜ್ಯ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ನಟ, ನಿರ್ದೇಶಕ, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ಟರು ಅಭ್ಯರ್ಥಿಗಳಿಗಿಂತ ಮುನ್ನ ಆಖಾಡಕ್ಕೆ ಅಧಿಕೃತವಾಗಿ ಇಳಿದಿದ್ದಾರೆ. ಅದು ಅಭ್ಯರ್ಥಿಯಾಗಿ ಅಲ್ಲ. ಬದಲಾಗಿ ಮತದಾರರಲ್ಲಿ ಜಾಗೃತಿ ಮೂಡಿಸೋ ನಿಟ್ಟಿನಲ್ಲಿ ಎಲೆಕ್ಷನ್ ಕಮೀಷನ್, ನಿರ್ದೇಶಕ ಯೋಗರಾಜ್ ಭಟ್ ಬಳಿ ವಿಶೇಷ ಹಾಡೊಂದನ್ನು ರಚನೆ ಮಾಡಲು ಮುಂದಾಗಿರುವ ಮೂಲಕ. ಈ ನಿಟ್ಟಿನಲ್ಲಿ ಯೋಗರಾಜ್ ಭಟ್ಟರು ಈಗಾಗಲೇ 6 ವಿಶೇಷ ತಂಡಗಳನ್ನ ರಚಿಸಿ ರಾಜ್ಯಾದ್ಯಂತ ಕಳುಹಿಸಿಕೊಟ್ಟಿದ್ದು ಚಿತ್ರೀಕರಣ ಮಾಡಲು ಶುರುಮಾಡಿದ್ದಾರೆ.

ಇನ್ನು ಭಟ್ಟರೇ ಸಾಹಿತ್ಯ ರಚಿಸಿ, ನಿರ್ದೇಶಿಸಲಿರೋ ಈ ಎಲೆಕ್ಷನ್ ಗೀತೆಗೆ ವಿ ಹರಿಕೃಷ್ಣ ಸಂಗೀತ, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಲಿದ್ದು, ಭಟ್ಟರ ಪದಕ್ಕೆ ವಿಜಯ್ ಪ್ರಕಾಶ್ ಧ್ವನಿಗೂಡಿಸಲಿದ್ದಾರೆ. ಇದಲ್ಲದೇ ಇದೇ ಮಾರ್ಚ್ 30ರಂದು ಹಾಡನ್ನ ವಿಧಾನ ಸೌಧದ ಮುಂದೆ ಚಿತ್ರಿಸಲಾಗುತ್ತದೆ ಅಂತ ಯೋಗರಾಜ್ ಭಟ್ಟರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Facebook Auto Publish Powered By : XYZScripts.com