ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದ ರೆಬೆಲ್ ಸ್ಟಾರ್

ಇಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಸೀಸನ್ 2 ಆರಂಭವಾಗಿದೆ. ಕನ್ನಡ ಸಿನಿಮಾರಂಗದ ಬಹುತೇಕ ಸ್ಟಾರ್ ಗಳು ಬೆಳಗ್ಗೆಯಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇರಿಕೊಂಡಿದ್ದಾರೆ. ನಟ ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಕಲಾವಿದರಿಗೆ ಸಾಥ್ ನೀಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು.

ಸಾಕಷ್ಟು ಗಂಟೆಗಳ ಕಾಲ ಕ್ರೀಡಾಂಗಣದಲ್ಲಿ ಕಾಲ ಕಳೆದ ಅಂಬಿ ಕೆಲವು ಸಮಯ ಚೇರ್ ನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಚೇರ್ ನಲ್ಲಿ ಕೂತಿದ್ದ ಅಂಬರೀಶ್, ಎದ್ದು ನಿಲ್ಲಲ್ಲು ಹೋದಾಗ ಕುಸಿದು ಬಿದ್ದಿದ್ದಾರೆ.

ಬೆಳಗ್ಗೆ ಇಂದ ಹೆಚ್ಚು ಓಡಾಡಿದ್ದರಿಂದ ಅಂಬರೀಶ್ ಅವರಿಗೆ ಕಾಲು ನೋವಿತ್ತು. ಸ್ನಾಯು ಸೆಳೆತದಿಂದ ಕುಸಿದು ಬಿದ್ದಿರುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸದ್ಯ ಅಂಬರೀಶ್ ಚಿನ್ನಾಸ್ವಾಮಿ ಕ್ರೀಡಾಂಗಣದಿಂದ ತಮ್ಮ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ.

ಮ್ಯಾಚ್ ಶುರುವಾದಾಗಿನಿಂದ ಅಂಬರೀಶ್ ಕ್ರೀಡಾಂಗಣದಲ್ಲಿಯೇ ಇದ್ದರು. ಅಂಬರೀಶ್ ಅವರನ್ನು ಅಲ್ಲೇ ಹತ್ತಿರವಿರುವ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ರಾಕ್ಲೈನ್ ವೆಂಕಟೇಶ್ ಅಂಬರೀಶ್ ಅವರ ಜೊತೆ ಆಸ್ಪತ್ರೆಗೆ ತೆರಳಿದ್ದಾರೆ.

ಅಂಬರೀಶ್ ನಿಜವಾಗಿಯೂ ಕಾಲು ನೋವಿನಿಂದ ಕುಸಿದು ಬಿದ್ದಿದ್ದಾರೆಯೇ ಎನ್ನುವುದು ಇನ್ನು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಕೆಲವರು ಕಾಲು ನೋವಿನಿಂದ ಹೀಗಾಗಿದೆ ಎಂದರೆ ಇನ್ನು ಕೆಲವರು ಕಾಲು ಎಡವಿ ಬಿದ್ದಿರಬಹುದು, ಅಥವಾ ಅತಿಯಾದ ಬಿಸಿಲಿನಿಂದಾಗಿ ಬಳಲಿರಬಹುದು. ಎಂದಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಂಬಿ ತೆರಳಿದ್ದಾರೆ ಅಂಬಿ.

source: filmibeat.com

Facebook Auto Publish Powered By : XYZScripts.com