ಚಿತ್ರ ವೀಕ್ಷಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ಶಿವಣ್ಣನ ಅಭಿಮಾನಿಗಳು.. ಏನದು? ಇಲ್ಲಿ ಓದಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ಬಿಡುಗಡೆ ಆಗಲು ಇನ್ನು ಎರಡು ದಿನಗಳು ಅಷ್ಟೇ ಬಾಕಿ ಇದೆ. ಮೇಕಿಂಗ್ ಹಾಗೂ ಸಿನಿಮಾ ಹಾಡುಗಳಿಂದಲೇ ಚಿತ್ರದ ಬಗ್ಗೆ ಬಾರಿ ಕ್ಯೂರಿಯಾಸಿಟಿ ಮೂಡಿಸಿರುವ ಟಗರು ಚಿತ್ರವನ್ನ ವೀಕ್ಷಣೆ ಮಾಡಲು ಬರುವ ಜನರಿಗೆ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸಿನಿಮಾ ಪ್ರಾರಂಭ ಆದಾಗ ಮೊಬೈಲ್ ನಲ್ಲಿ ವಿಡಿಯೋ ಹಾಗೂ ಫೋಟೋ ತೆಗೆಯುವುದನ್ನ ಮಾಡಿದರೆ ಶಿಕ್ಷೆಗೆ ಒಳಗಾಗುತ್ತೀರಾ ಎಂದು ಎಚ್ಚರಿಕೆ ನೀಡಿದ್ದಾರೆ. ಚಿತ್ರ ಬಿಡುಗಡೆಯ ದಿನ ಶಿವರಾಜ್ ಕುಮಾರ್ ಅಭಿಮಾನಿಗಳು ತಂಡಗಳನ್ನ ಮಾಡಿಕೊಂಡು ಟಗರು ಬಿಡುಗಡೆ ಆಗಿರುವ ಬೆಂಗಳೂರಿನ ಪ್ರಮುಖ ಥಿಯೇಟರ್ ಗಳಿಗೆ ಭೇಟಿ ನೀಡಿ ಮೊಬೈಲ್ ನಲ್ಲಿ ವಿಡಿಯೋಗಳನ್ನ ತೆಗೆಯದಂತೆ ಹಾಗೂ ಪೈರಸಿ ಕಾಟದಿಂದ ಚಿತ್ರವನ್ನ ಕಾಪಾಡಲು ನಿರ್ಧರಿಸಿದ್ದಾರೆ.

ಕಳೆದ ಬಾರಿ ‘ದೊಡ್ಮನೆ ಹುಡುಗ’ ಸಿನಿಮಾ ಬಿಡುಗಡೆ ಆದ ಸಂದರ್ಭದಲ್ಲಿಯೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಇದೇ ರೀತಿಯಲ್ಲಿ ತಂಡಗಳನ್ನ ಮಾಡಿಕೊಂಡು ಸಿನಿಮಾಮಂದಿರಗಳಿಗೆ ಭೇಟಿ ನೀಡಿದ್ದರು.

ಟಗರು ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಯ ಸಿನಿಮಾರಂಗದವನ್ನು ಆಕರ್ಶಿಸುತ್ತಿರುವ ಚಿತ್ರವಾಗಿದ್ದು. ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದಂತೆ ನಿರೀಕ್ಷೆಗಳು ದುಪ್ಪಟ್ಟಾಗುತ್ತಿದೆ.

Facebook Auto Publish Powered By : XYZScripts.com