ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆದ ರಶ್ಮಿಕಾ ಮಂದಣ್ಣ.. ಏನದು? ಇಲ್ಲಿ ತಿಳಿಯಿರಿ

ಕರ್ನಾಟಕ ಕ್ರಶ್ ಅಂತಾನೇ ಫೇಮಸ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಪ್ರಿಯರಿಗೆ ಹಾರ್ಟ್ ಫೆವರೆಟ್ ನಾಯಕಿ. ಹೆಸರಿಗೆ ಮಾತ್ರ ಕರ್ನಾಟಕದ ಕ್ರಶ್ ಆದರೆ ಟಾಲಿವುಡ್ ನಲ್ಲಿಯೂ ರಶ್ಮಿಕಾ ಅವರಿಗೆ ಭಾರಿ ಬೇಡಿಕೆ ಇದೆ.

ಕೆಲವು ದಿನಗಳ ಹಿಂದೆಯಷ್ಟೇ ಮೆಗಾ ಸ್ಟಾರ್ ಚಿರಂಜೀವಿ ಕೂಡ ರಶ್ಮಿಕಾ ಮಂದಣ್ಣ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಹೇಳಿದ್ದರು. ಸದ್ಯ ರಶ್ಮಿಕಾ ಚಿತ್ರರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಲು ಹೊರಟಿದ್ದಾರೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ರಶ್ಮಿಕಾ ಅಭಿನಯದ ಮೊದಲ ಚಿತ್ರ ಕಿರಿಕ್ ಪಾರ್ಟಿ ತೆಲುಗಿನಲ್ಲಿ ರಿಮೇಕ್ ಆಗಿ ಬಿಡುಗಡೆಗೆ ತಯಾರಾಗಿದೆ.

ಇದರ ಜೊತೆಯಲ್ಲಿ ರಶ್ಮಿಕಾ ಅಭಿನಯದ ಮತ್ತೊಂದು ಚಿತ್ರ ಕೂಡ ಟಾಲಿವುಡ್ ಅಂಗಳದಲ್ಲಿ ರಿಮೇಕ್ ಆಗಲು ತಯಾರಾಗಿದೆ. ಹೌದು ಗಣೇಶ್ ಹಾಗೂ ರಶ್ಮಿಕಾ ಅಭಿನಯದ ಚಮಕ್ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗಲಿದೆ.

ಅಭಿನಯಿಸದ ಮೂರು ಚಿತ್ರಗಳಲ್ಲಿ ಎರಡು ಸಿನಿಮಾಗಳು ತೆಲುಗಿನಲ್ಲಿ ರಿಮೇಕ್ ಆಗುತ್ತಿರುವುದು ರಶ್ಮಿಕಾ ಅಭಿಮಾನಿಗಳಿಗೆ ಖುಷಿ ತಂದಿದೆ. ತೆಲುಗಿನ ಚಮಕ್ ಚಿತ್ರದಲ್ಲಿ ನಾಯಕಿ ಆಗಿ ನಟಿ ರಚಿತಾ ರಾಮ್ ಅಭಿನಯಿಸುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ.

ಒಟ್ಟಾರೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೆಲವೇ ದಿನಗಳಲ್ಲಿ ಇಂತಹ ಉತ್ತಮವಾದ ಬೆಳವಣಿಗೆ ಕನ್ನಡ ಸಿನಿಮಾ ಅಭಿಮಾನಿಗಳು ಸಂತಸವನ್ನ ವ್ಯಕ್ತ ಪಡಿಸಿದ್ದಾರೆ.

Facebook Auto Publish Powered By : XYZScripts.com