‘ಚಿಟ್ಟೆ’ಗಾಗಿ ಹರ್ಷಿಕಾ ಪೂಣಚ್ಚ ನೈಟ್‌ಔಟ್!

ನಟಿ ಹರ್ಷಿಕಾ ಪೂಣಚ್ಚ ಅಭಿನಯದ ಮುಂದಿನ ಸಿನಿಮಾ ಚಿಟ್ಟೆ ಶೂಟಿಂಗ್ ಆರಂಭವಾಗಿದೆ. ಈ ಸಿನಿಮಾಗಾಗಿ ಹರ್ಷಿಕಾ ರಾತ್ರಿಯೆಲ್ಲಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಸಿನಿಮಾದ ಬಹುತೇಕ ದೃಶ್ಯಗಳನ್ನು ರಾತ್ರಿಯಲ್ಲೇ ಚಿತ್ರೀಕರಿಸಲಾಗುತ್ತಿದೆ. ಸಂಜೆ ಆರು ಗಂಟೆಗೆ ಶೂಟಿಂಗ್ ಆರಂಭವಾದರೇ ಮಧ್ಯರಾತ್ರಿಗೆ ಮುಗಿಯುತ್ತದೆ ಎಂದು ಹರ್ಷಿಕಾ ಪೂಣಚ್ಚ ತಿಳಿಸಿದ್ದಾರೆ.

ಸಿನಿಮಾ ಶೂಟಿಂಗ್ ಸಮಯ ರಾತ್ರಿಯಾಗಿರುವುದರಿಂದ ಸ್ವಲ್ಪ ಒತ್ತಡವಿದೆ. ಆದರೂ ರಾತ್ರಿ ನಕ್ಷತ್ರಗಳ ಅಡಿಯಲ್ಲಿ ನಡೆಯುವ ಚಿತ್ರೀಕರಣದಲ್ಲಿ ಭಾಗವಹಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ.

ನಾಯಕ ನಟ ಯಶಸ್ ಸೂರ್ಯ ತನ್ನ ಪೇಂಟಿಂಗ್ ಮೂಲಕ ತನ್ನ ಪ್ರೇಮವನ್ನು ನಿವೇದಿಸಿಕೊಳ್ಳುತ್ತಾನೆ. ಚಿತ್ರದಲ್ಲ ಪೈಂಟರ್ ಪಾತ್ರ ಮಾಡುತ್ತಿರುವ ಯಶಸ್ಸ ಆಕೆಯ ದೇಹದ ಮೇಲೆ ಚಿತ್ರ ಬಿಡಿಸುವ ಮೂಲಕ ತನ್ನ ಪ್ರೀತಿಯನ್ನು ಹಂಚಿಕೊಳ್ಳುತ್ತಾನೆ ಎಂದು ಹರ್ಷಿಕಾ ವಿವರಿಸಿದ್ದಾರೆ. ಇತ್ತೀಚೆಗೆ ನಾವು ಪೈಂಟಿಂಗ್ ಮಾಡುವ ದೃಶ್ಯದ ಶೂಟಿಂಗ್ ಪೂರ್ಣಗೊಳಿಸಿದೆವು ಎಂದು ಹರ್ಷಿಕಾ ತಿಳಿಸಿದ್ದಾರೆ. ನಾವು ಮೊದಲ ಹಂತದ ಸಿನಿಮಾ ಶೂಟಿಂಗ್ ನಲ್ಲಿದ್ದೇವೆ ಎಂದು ಹರ್ಷಿಕಾ ಹೇಳಿದ್ದಾರೆ.

ಎಂ.ಎಲ್. ಪ್ರಸನ್ನ ಅವರ ಚೊಚ್ಚಲ ನಿರ್ದೇಶನದಲ್ಲಿ ‘ಚಿಟ್ಟೆ’ ಚಿತ್ರ ಮೂಡಿಬರುತ್ತಿದ್ದು, ಇದರಲ್ಲಿ ನಾಯಕನಾಗಿ ಯಶಸ್ ಸೂರ್ಯ ಹಾಗೂ ನಾಯಕಿಯಾಗಿ ಹರ್ಷಿಕಾ ನಟಿಸುತ್ತಿದ್ದಾರೆ.

Courtesy: Kannadaprabha

Facebook Auto Publish Powered By : XYZScripts.com